Friday, April 26, 2024
Homeಉದ್ಯಮಬೆಳ್ತಂಗಡಿ : ಗ್ರಾಮೀಣ ಪ್ರದೇಶದಲ್ಲಿ ನಕಲಿ‌ ನೋಟು ಪತ್ತೆ.

ಬೆಳ್ತಂಗಡಿ : ಗ್ರಾಮೀಣ ಪ್ರದೇಶದಲ್ಲಿ ನಕಲಿ‌ ನೋಟು ಪತ್ತೆ.

spot_img
- Advertisement -
- Advertisement -

ಬೆಳ್ತಂಗಡಿ : ಇತ್ತಿಚಿನ ದಿನಗಳಲ್ಲಿ ಖೋಟಾನೋಟು ಚಲಾವಣೆ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಈ ಜಾಲ ಬೆಳ್ತಂಗಡಿ ಅಸುಪಾಸಿನಲ್ಲಿ ಚಲಾವಣೆಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಕಾಪಿನಡ್ಕದ ಅಲಡ್ಕ ಚಿಕನ್ ಸೆಂಟರ್ ಮಾಲಕ ದೇವದಾಸ್ ಎಂಬರಿಗೆ ಇಂದು ಬೆಳಿಗ್ಗೆ ಕಾಪಿನಡ್ಕದ ಹೋಟೆಲ್ ಮಾಲಕರೊಬ್ಬರು ವ್ಯವಹಾರ ಸಮಯದಲ್ಲಿ 100 ರೂಪಾಯಿಯ 3 ನೋಟು ನೀಡಿದ್ದು (300 ರೂಪಾಯಿ)ಅದು ಹೊಸ ನೋಟಾಗಿತ್ತು, ಅವರು ತನ್ನ ಚಿಕನ್ ಅಂಗಡಿಯಲ್ಲಿ ವ್ಯವಹಾರ ಸಮಯ ಬೇರೆಯರಿಗೆ ನೀಡಿದಾಗ ಅವರಿಗೆ ಒಂದು ನೂರು ರೂಪಾಯಿ ನೋಟು ನಕಲಿ‌ ನೋಟು ಎಂದು ಬೆಳಕಿಗೆ ಬಂದಿದೆ . ನೋಟನ್ನು ಪರೀಕ್ಷಿಸಿದಾಗ ಬಲಭಾಗದಲ್ಲಿ ಗಾಂಧಿಜಿ ನಾಪತ್ತೆಯಾಗಿದ್ದರು, ಅಲ್ಲದೆ ನೇರಳೆ ಬಣ್ಣ ನೀರು ತಾಗಿ ಬಣ್ಣ ಬದಲಾಗಿತ್ತು, ಅದು ಜೆರಾಕ್ಸ್ ಮಾಡಿದ ನಕಲಿ ನೋಟು ಎಂದು ಸ್ವಷ್ಟವಾಗಿ ಕಾಣುತ್ತಿತ್ತು.
ಈ ಬಗ್ಗೆ ದೇವಿದಾಸ್ ಬಳಿ ಹಣ ಪಡೆದ ವ್ಯಕ್ತಿ ವಿಚಾರಿಸಿದಾಗ ಅದು ಕಾಪಿನಡ್ಕ ಹೊಟೇಲ್ ಅವರಿಗೆ ತಿಳಿಸಿದಾಗ ನನಗೆ ಬಂದ ಕಸ್ಟಮರ್ ನೀಡಿದ್ದು ಯಾರೆಂದು ಗೊತ್ತಾಗಿಲ್ಲ ಎಂದಿದ್ದಾರೆ‌.
ಈ ನಕಲಿ ನೋಟಿನ ಬಗ್ಗೆ ದೇವಿದಾಸ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋ ಹಾಕಿ ಸಾರ್ವಜನಿಕರು ಜಾಗೃತೆ ವಹಿಸಬೇಕೆಂದು ಮನವಿ ಮಾಡಿದ್ದಾರೆ.


ಈ ಬಗ್ಗೆ ಅಲಡ್ಕ ಚಿಕನ್ ಸೆಂಟರ್ ಮಾಲಕರಾದ ದೇವಿದಾಸ್ ಅವರಲ್ಲಿ ಮಾಹಿತಿ ಪಡೆದಾಗ ನಾವು ವ್ಯವಹಾರ ಮಾಡುವವರು ಐನೂರು ,ಎರಡು ಸಾವಿರ ನಕಲಿ ನೋಟು ಬಂದಾಗ ಬಗ್ಗೆ ಜಾಗೃತೆ ವಹಿಸುತ್ತೇವೆ ನಮಗೆ 100 ರೂಪಾಯಿ ಕೂಡ ನಕಲಿ ಬರುತ್ತಿರುವುದು‌ ಇದೆ ಮೊದಲು ಬೆಳಕಿಗೆ ಬಂದಿದೆ, ಇದನ್ನು ಹೊಟೇಲ್ ಮಾಲಕರಿಗೆ ಯಾರು ನೀಡಿದ್ದಾರೆ ಎಂದು ಅವರಿಗೂ ಗೊತ್ತಾಗುತ್ತಿಲ್ಲ ನಾನು ಅವರಿಗೆ ಅ ನೋಟನ್ನು ವಾಪಸ್ ನೀಡಿದ್ದೇನೆ ಎಂದು “ಮಹಾಎಕ್ಸ್ ಪ್ರೆಸ್” ಗೆ ಪ್ರತಿಕ್ರಿಯಿಸಿದ್ದಾರೆ‌.

- Advertisement -
spot_img

Latest News

error: Content is protected !!