Monday, June 8, 2026
Homeತಾಜಾ ಸುದ್ದಿಆಪ್ತನ ಮಗಳ ಮದುವೆಯಲ್ಲಿ ಕೊರೋನಾ ನಿಯಮ ಗಾಳಿಗೆ ತೂರಿದ ಶ್ರೀರಾಮುಲು!…

ಆಪ್ತನ ಮಗಳ ಮದುವೆಯಲ್ಲಿ ಕೊರೋನಾ ನಿಯಮ ಗಾಳಿಗೆ ತೂರಿದ ಶ್ರೀರಾಮುಲು!…

- Advertisement -
- Advertisement -

ರಾಯಚೂರು:ಸಚಿವ ಶ್ರೀರಾಮುಲು ಅವರ ಆಪ್ತ ನಾಗರಾಜ್ ನೆಕ್ಕಂಟಿ ಎನ್ನುವವರ ಮಗಳ ಮದುವೆ ಇಂದು ಅದ್ದೂರಿಯಾಗಿ ನಡೆದಿದೆ. ಸಾವಿರಾರು ಮಂದಿ ಮದುವೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು,ಕೋವಿಡ್​ ನಿಯಮಗಳನ್ನು ಪಾಲಿಸದೇ ಮದುವೆಯ ಮಾಡಲಾಗಿದೆ ಎಂದು ವರದಿಯಾಗಿದೆ. ಸಭೆ ಸಮಾರಂಭಗಳಿಗೆ ಜನರ ಮಿತಿಯಿದ್ದರೂ ಸಹಸ್ರಾರು ಮಂದಿ ಭಾಗಿಯಾಗಿದ್ದಾರೆ.

ಮದುವೆಯಲ್ಲಿ ಬಿಜೆಪಿ ಸಚಿವ ಶ್ರೀರಾಮುಲು ಕೂಡ ಹಾಜರಿದ್ದು, ಮಾಸ್ಕ್ ಧರಿಸದೇ ಓಡಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಸಿಂಧನೂರು ನಗರದ ಹೊರವಲಯದಲ್ಲಿ ಇರುವ ಹೊಸಳ್ಳಿ ಜೆ.ಇ ಗ್ರಾಮ ವ್ಯಾಪ್ತಿಯಲ್ಲಿನ ಕಮ್ಮವಾರಿ ಸಂಘದ ಯಲಮಂಚಿಲಿ ವಾಸುದೇವರಾವ್ ಕಲ್ಯಾಣ ಮಂಟಪದಲ್ಲಿ ಈ ಮದುವೆ ನಡೆದಿದೆ.

- Advertisement -

Latest News

error: Content is protected !!