Sunday, May 19, 2024
Homeತಾಜಾ ಸುದ್ದಿಇಂದಿನಿಂದ ಭಾರತದಲ್ಲಿ ಪಬ್ ಜಿ ಅಧಿಕೃತವಾಗಿ ಸ್ಥಗಿತ

ಇಂದಿನಿಂದ ಭಾರತದಲ್ಲಿ ಪಬ್ ಜಿ ಅಧಿಕೃತವಾಗಿ ಸ್ಥಗಿತ

spot_img
- Advertisement -
- Advertisement -

ನವದೆಹಲಿ: ಯುವ ಸಮುದಾಯದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟು ಹಾಕಿದ್ದ ಪಬ್ ಜಿ ಆಟವನ್ನು ಭಾರತ ಈಗಾಗಲೇ ನಿಷೇಧಿಸಿತ್ತು. ಆದರೆ ನಿಷೇಧಿಸಿ ಸುಮಾರು 2 ತಿಂಗಳ ನಂತರ ಪಬ್ ಬಿ ಭಾರತದಲ್ಲಿ ಅಧಿಕೃತವಾಗಿ ತನ್ನ ಆಟ ನಿಲ್ಲಿಸಿದೆ.

ಕೇಂದ್ರ ಸರಕಾರ ಚೀನಾದ 114 ಮೊಬೈಲ್ ಅಪ್ಲಿಕೇಶನ್ ಅಕ್ರಮವಾಗಿ ಗ್ರಾಹಕರ ಮಾಹಿತಿ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕಳೆದ ಸೆಪ್ಟೆಂಬರ್ ನಲ್ಲಿ 114 ಮೊಬೈಲ್ ಗಳನ್ನು ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಪಬ್ ಜಿ ಮೊಬೈಲ್ ಮತ್ತು ಪಬ್ ಜಿ ಲೈಟ್ ಅಪ್ಲಿಕೇಶನ್ ಗಳನ್ನು ಗೂಗಲ್ ಪ್ಲೆ ಮತ್ತು ಆಯಪಲ್ ಆಪ್ ನಿಂದ ತೆಗೆದು ಹಾಕಲಾಗಿದೆ.

ಪಬ್ ಜಿ ಆಡಳಿತ ಮಂಡಳಿ ತನ್ನ ಫೇಸ್ ಬುಕ್ ಪೇಜ್ ನಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಅಕ್ಟೋಬರ್ 30ರಿಂದ ಭಾರತದಲ್ಲಿ ತನ್ನ ಸೇವೆ ನಿಲ್ಲಿಸಿದ್ದೇವೆ ಎಂದು ತಿಳಿಸಿದೆ.

- Advertisement -
spot_img

Latest News

error: Content is protected !!