Monday, May 20, 2024
Homeಕರಾವಳಿಮಲ್ಪೆ ಕಡಲತಡಿಗೆ ಸುಂದರ ಕಲಾಕೃತಿಗಳ ಮೆರುಗು!……..

ಮಲ್ಪೆ ಕಡಲತಡಿಗೆ ಸುಂದರ ಕಲಾಕೃತಿಗಳ ಮೆರುಗು!……..

spot_img
- Advertisement -
- Advertisement -

ಮಲ್ಪೆ: ಇಲ್ಲಿನ ಸೀವಾಕ್‌ ವೇ ಸಮೀಪ ಸುಮಾರು 2 ಕೋ.ರೂ. ವೆಚ್ಚದಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿಯ ಅನುದಾನದಲ್ಲಿ ಸುಂದರ ಕಲಾಕೃತಿಗಳೊಂದಿಗೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.ಸುಮಾರು 600 ಮೀ. ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿ ಕೆಲಸಗಳು ವೇಗವಾಗಿ ಸಾಗುತ್ತಿದೆ.

ಇಲ್ಲಿ ನಿರ್ಮಾಣಗೊಳ್ಳುತ್ತಿರುವ 5 ಅಡಿಗಳ ಎತ್ತರವಿರುವ ಸಿಮೆಂಟ್‌ ಕಲಾಕೃತಿಯ ಜಟಾಯು ಪ್ರತಿಮೆಯನ್ನು ಕಲಾವಿದ ಪುರುಷೋತ್ತಮ ಅಡ್ವೆ ಅವರು ನಿರ್ಮಿಸಿದ್ದು, ಜಟಾಯು ಪ್ರತಿಮೆ ಪ್ರವಾಸಿಗರನ್ನು ಆಕರ್ಷಿಸಲಿದೆ. ಉಡುಪಿ ನಿರ್ಮಿತಿ ಕೇಂದ್ರವು ಸುಮಾರು 600 ಮೀ. ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡಿದ್ದು, ಜಟಾಯು ಪ್ರತಿಮೆ ಜತೆಯಲ್ಲಿ ಪಾತಿದೋಣಿ ಮೀನುಗಾರಿಕೆಯ ಪ್ರತಿಕೃತಿ ಮತ್ತು ಮೀನುಗಾರಿಕೆ ದೋಣಿಯಲ್ಲಿ ದುಡಿಯುವ ಮೀನುಗಾರರ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಪಕ್ಕದಲ್ಲಿ ವಾಕಿಂಗ್‌ ಟ್ರ್ಯಾಕ್‌, ಮಕ್ಕಳ ಆಟಕ್ಕೆ ಸಂಬಂಧಿಸಿದಂತೆ, ಜಾರುಬಂಡಿ, ಸ್ಯಾಂಡ್‌ಪಿಟ್‌, ಕುಳಿತುಕೊಳ್ಳಲು ಕಲ್ಲುಬೆಂಚುಗಳು, ಲೈಟಿಂಗ್‌ಗಳನ್ನು ಅಳವಡಿಸಲಾಗುತ್ತಿದೆ.

- Advertisement -
spot_img

Latest News

error: Content is protected !!