Friday, June 5, 2026
Homeಮಹಾನ್ಯೂಸ್ಪುಣೆಯಲ್ಲಿ ಕರಾವಳಿ ಮೂಲದ ಶಿವಸೇನಾ ಮುಖಂಡ ರಾಹುಲ್ ಶೆಟ್ಟಿಯನ್ನು ಗುಂಡಿಕ್ಕಿ ಹತ್ಯೆ

ಪುಣೆಯಲ್ಲಿ ಕರಾವಳಿ ಮೂಲದ ಶಿವಸೇನಾ ಮುಖಂಡ ರಾಹುಲ್ ಶೆಟ್ಟಿಯನ್ನು ಗುಂಡಿಕ್ಕಿ ಹತ್ಯೆ

- Advertisement -
- Advertisement -

ಪುಣೆ: ಮಹಾರಾಷ್ಟ್ರದ ಲೊನವಾಲದಲ್ಲಿ ಶಿವಸೇನೆಯ ಮುಖಂಡನನ್ನು ಹತ್ಯೆ ಮಾಡಲಾಗಿದೆ. ಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿ ಪುತ್ರ ರಾಹುಲ್ ಹತ್ಯೆಗೆ ಒಳಗಾದವರು. ಇಂದು ಬೆಳಗ್ಗೆ 9-30 ರ ಸುಮಾರಿಗೆ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.

ಮೂಲತಃ ಕರಾವಳಿಯವರಾದ 43 ವರ್ಷದ ರಾಹುಲ್ ಶೆಟ್ಟಿ ಅವರ ಮೇಲೆ, ಅವರ ಮನೆಯ ಮುಂದಿನ ಟೀ ಸ್ಟಾಲ್ ಬಳಿಯೇ ಅಪರಿಚಿತರು ಮೂರು ಬಾರಿ ಗುಂಡು ಹಾರಿಸಿದ್ದಾರೆ. ಇನ್ನು ರಾಹುಲ್ ಶಿವಸೇನಾದ ಸ್ಥಳೀಯ ಘಟಕದ ಅಧ್ಯಕ್ಷರಾಗಿದ್ದರು.ಗುಂಡಿನ ದಾಳಿಯಾಗುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.

ಇನ್ನು ಹತ್ಯೆ ನಡೆದ ಸ್ಥಳದ ಸಿಸಿ ಕ್ಯಾಮರಾದ ದೃಶ್ಯಗಳನ್ನು ವಶಕ್ಕೆ ಪಡೆದ ಪೊಲೀಸರು ಶಂಕಿತ ಓರ್ವನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಇದೇ ಪರಿಸರದಲ್ಲಿ ನಿನ್ನೆ ಗಣೇಶ್ ನಾಯ್ಡು ಅನ್ನೋ ವ್ಯಕ್ತಿಯನ್ನು ಕೂಡ ಗುಂಡಿಕ್ಕಿ ಕೊಲೆಗೈಯಲಾಗಿತ್ತು.

- Advertisement -

Latest News

error: Content is protected !!