Saturday, June 6, 2026
Homeತಾಜಾ ಸುದ್ದಿವೈದ್ಯನ ವಿರುದ್ಧ ಲೈಂಗಿಕ ಕಿರುಕುಳ ಆರೋಪ-ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ ನರ್ಸ್!..

ವೈದ್ಯನ ವಿರುದ್ಧ ಲೈಂಗಿಕ ಕಿರುಕುಳ ಆರೋಪ-ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ ನರ್ಸ್!..

- Advertisement -
- Advertisement -

ಬೆಂಗಳೂರು: ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರ ವಿರುದ್ಧ 19 ವರ್ಷದ ನರ್ಸ್ ದೂರು ದಾಖಲು ಮಾಡಿದ್ದಾರೆ. ಕೆಲಸದ ಸಮಯದಲ್ಲಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪಿಸಿ ದೂರು ದಾಖಲಾಗಿದೆ.ನರ್ಸ್ ಅದೇ ಆಸ್ಪತ್ರೆಯಲ್ಲಿ ಒ.ಟಿ. ಟೆಕ್ನೀಷಿಯನ್ ಎಂದು ಹೇಳಲಾಗುತ್ತಿದ್ದು,
ಡಾ.ಸಿ.ಎಂ.ಪರಮೇಶ್ವರ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.

ನರ್ಸ್ ಆರೋಪದಲ್ಲಿ ರಾತ್ರಿ ಸಮಯ ಎನ್ನದೇ ಫೋನ್ ಮೆಸೇಜ್ ಮಾಡುವ ಮೂಲಕ ನನಗೆ ಕಿರುಕುಳ ನೀಡಿದ್ದಾರೆ. ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುವಾಗಲೂ ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಹೇಳಿದ್ದಾರೆ.ಇನ್ನು ನರ್ಸ್‌ನ ಲೈಂಗಿಕ ಕಿರುಕುಳ ಆರೋಪದ ದೂರಿನನ್ವಯ ಡಾ.ಸಿ.ಎಂ. ಪರಮೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

- Advertisement -

Latest News

error: Content is protected !!