- Advertisement -
- Advertisement -
ಸುಳ್ಯ: ಜಾಲ್ಸೂರು ಸಮೀಪದ ಪೆರ್ನಾಜೆ ಪ್ರದೇಶದಲ್ಲಿ ಕಾಡಾನೆಯೊಂದು ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿರುವ ಘಟನೆ ನಡೆದಿದೆ.
ಪೆರ್ನಾಜೆ ನಿವಾಸಿ ಕುಮಾರ್ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಸುಮಾರು 25 ಬಾಳೆಗಿಡಗಳು, 5 ಅಡಿಕೆ ಗಿಡಗಳು ಹಾಗೂ 5 ದೀಗುಜ್ಜೆ ಮರಗಳನ್ನು ಹಾನಿಗೊಳಿಸಿದೆ ಎನ್ನಲಾಗಿದೆ.
ಕಾಡಾನೆ ನೂಜಿಬೈಲ್ ಭಾಗದತ್ತ ತೆರಳಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆಗಳ ನಿರಂತರ ಸಂಚಾರದಿಂದ ಕೃಷಿಕರಲ್ಲಿ ಆತಂಕ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
- Advertisement -


