Friday, June 5, 2026
Homeಆರಾಧನಾಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಲ್ಲಾ ಸೇವೆಗಳು ಪುನರಾರಂಭ

ಇಂದಿನಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಲ್ಲಾ ಸೇವೆಗಳು ಪುನರಾರಂಭ

- Advertisement -
- Advertisement -

ಸುಬ್ರಹ್ಮಣ್ಯ: ಕರಾವಳಿ ಜನರ ಶ್ರದ್ಧಾಭಕ್ತಿಯ ಪ್ರತೀಕವಾಗಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಎಲ್ಲಾ ಸೇವೆಗಳು ಪುನರಾರಂಭಗೊಳ್ಳಲಿದೆ, ಎಂದು ದೇಗುಲದ ಆಡಳಿತಾಧಿಕಾರಿ ಎಂ.ಜೆ ರೂಪ ತಿಳಿಸಿದ್ದಾರೆ.
ಕೊರೋನ ಲಾಕ್ಡೌನ್ ನಂತರ ಕ್ಷೇತ್ರದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತಾದರೂ ಸೇವೆಗಳನ್ನು ನಿರ್ಭಂದಿಸಲಾಗಿತ್ತು. ಈಗ ಮುಜರಾಯಿ ಇಲಾಖೆಯ ಆದೇಶದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡುಸೇವೆಗಳು ಆರಂಭಗೊಳ್ಳಲಿವೆ.
ಈ ಹಿಂದಿನಂತೆ ಸರ್ಪಸಂಸ್ಕಾರ, ಆಶ್ಲೇಷಬಲಿ ಸೇರಿದಂತೆ ಪ್ರಮುಖ ಸೇವೆಗಳನ್ನು ನೀಡಲು ಭಕ್ತರಿಗೆ ಅವಕಾಶವಿದ್ದು ಹಲವು ಶರತ್ತುಗಳ ಆಧಾರದಲ್ಲಿ ಸೇವಾಕಾರ್ಯ ನಡೆಯಲಿದೆ.

- Advertisement -

Latest News

error: Content is protected !!