Thursday, June 4, 2026
Homeತಾಜಾ ಸುದ್ದಿಚಿಕ್ಕಮಗಳೂರಿನ 38ರ ಆಂಟಿಗೆ 22 ವರ್ಷದ ಯುವಕನೊಂದಿಗೆ 5ನೇ ಮದುವೆ, ಇದುವೇ ಲಾಸ್ಟ್ ಮದುವೆ ಅಂತಿದ್ದಾರೆ...

ಚಿಕ್ಕಮಗಳೂರಿನ 38ರ ಆಂಟಿಗೆ 22 ವರ್ಷದ ಯುವಕನೊಂದಿಗೆ 5ನೇ ಮದುವೆ, ಇದುವೇ ಲಾಸ್ಟ್ ಮದುವೆ ಅಂತಿದ್ದಾರೆ ಮೇಡಮ್

- Advertisement -
- Advertisement -

ಚಿಕ್ಕಮಗಳೂರು : ಚಿಕ್ಕಮಗಳೂರಿನ 38 ವರ್ಷದ ಮಹಿಳೆಯೊಬ್ಬಳು 22 ವರ್ಷದ ಯುವಕನನ್ನು ಐದನೇ ಮದುವೆಯಾಗಿದ್ದಾಳೆ. ಈ ಹಿಂದೆ 4 ಮಂದಿಯನ್ನು ಮದುವೆಯಾಗಿ ಅವರಿಗೆಲ್ಲಾ ಕೈಕೊಟ್ಟಿರುವ ಪ್ರಿಯಾ ಇದೀಗ 22 ವರ್ಷದ ಚಂದ್ರು ಎಂಬ ಯುವಕನನ್ನು ಮದುವೆಯಾಗಿದ್ದಾಳೆ. ಅಲ್ಲದೇ ಇದು ನನ್ನ ಕೊನೆ ಮದುವೆ ನಾವಿನ್ನು ಸಿಕ್ಕಾಪಟ್ಟೆ ಚೆನ್ನಾಗಿರುತ್ತೇವೆ ಎಂದು ಹೇಳಿಕೊಂಡಿದ್ದಾಳೆ.

ಈಗಾಗಲೇ 4 ವಿವಾಹವಾಗಿ  ಮಕ್ಕಳನ್ನು ಹೊಂದಿರುವ ಪ್ರಿಯಾಳನ್ನು ಮದುವೆವಾಗೋದಕ್ಕೆ ಚಂದ್ರು ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಯುವಕ ಚಂದ್ರು ನನಗೆ ಈಕೆಯೇ ಬೇಕು ಎಂದು ಹಠ ಹಿಡಿದು ಮದುವೆಯಾಗಿದ್ದಾನೆ. ಅಂದ್ಹಾಗೆ ಚಂದ್ರು ಹಾಗೂ ಪ್ರಿಯಾಗೆ ಒಂದು ತಿಂಗಳ ಪರಿಚಯವಷ್ಟೇ. ಅಷ್ಟರಲ್ಲೇ ಇಬ್ಬರೂ ನಾವಿಬ್ಬರು ಅಮರ ಪ್ರೇಮಿಗಳು ಅಂತಾ ಹೇಳಿಕೊಂಡು ಹಸೆಮಣೆ ಏರಿದ್ದಾರೆ. ಇನ್ನು ಕೂಡ ಸರಿಯಾಗಿ ಮೀಸೆ ಮೂಡದ ಚಂದ್ರುವನ್ನು ವರಿಸಿರುವ ಪ್ರಿಯಾ ಪದೇ ಪದೇ ಮದುವೆಯಾಗೋದನ್ನು ನೋಡಿ ಸಾಕಿರುವ ಸ್ಥಳೀಯರು ಇನ್ನಾದ್ರೂ ನೆಟ್ಟಗೆ ಸಂಸಾರ ಮಾಡಮ್ಮ ಅಂತಾ ಶುಭ ಹಾರೈಸಿದ್ದಾರೆ

- Advertisement -

Latest News

error: Content is protected !!