Saturday, June 6, 2026
Homeಕರಾವಳಿಬೆಳ್ತಂಗಡಿ: ಬಿಜೆಪಿ ಸರಕಾರದ ಜನವಿರೋಧಿ ನೀತಿ ವಿರುದ್ಧ ಕಾಂಗ್ರೆಸ್ ನಿಂದ ಪ್ರತಿಭಟನೆ- ಹರೀಶ್ ಪೂಂಜರ ಕಚೇರಿಗೆ...

ಬೆಳ್ತಂಗಡಿ: ಬಿಜೆಪಿ ಸರಕಾರದ ಜನವಿರೋಧಿ ನೀತಿ ವಿರುದ್ಧ ಕಾಂಗ್ರೆಸ್ ನಿಂದ ಪ್ರತಿಭಟನೆ- ಹರೀಶ್ ಪೂಂಜರ ಕಚೇರಿಗೆ ಮುತ್ತಿಗೆ

- Advertisement -
- Advertisement -

ಬೆಳ್ತಂಗಡಿ: ರಾಜ್ಯ ಬಿಜೆಪಿ ಸರಕಾರದ ಜನವಿರೋಧಿ ನೀತಿ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ನಗರ ಮತ್ತು ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಬೆಳ್ತಂಗಡಿಯಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು.

ಮಾಜಿ ಶಾಸಕ ವಸಂತ ಬಂಗೇರ, ನಗರ ಬ್ಲಾಕ್ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಂಜನ್ ಜಿ ಗೌಡ, ಯುವ ಕಾಂಗ್ರೆಸ್ ನ ಅಭಿನಂದನ್ ಹರೀಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಹರೀಶ್ ಪೂಂಜರ ಕಾಳಜಿ ರಿಲೀಫ್ ಫಂಡ್ ನಲ್ಲಿ ಜಮೆಯಾದ ಹಣದ ಲೆಕ್ಕಾಚಾರ ನೀಡಿ ಎಂದು ಆಗ್ರಹಿಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಶಾಸಕ ಹರೀಶ್ ಪೂಂಜರ ಕಚೇರಿಯ ಎದುರು ಪ್ರತಿಭಟನೆ ಮತ್ತ್ತುಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೋಲೀಸರ ಮತ್ತು ಪ್ರತಿಭಟನಾಕಾರರ ಮದ್ಯೆ ಮಾತಿನ ಚಕಮಕಿ ನಡೆಯಿತು.

ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ಮಾಡಲು‌ ಮಾತ್ರ ಅನುಮತಿ ಪಡೆದಿದ್ದ ಕಾಂಗ್ರೆಸ್ ನಾಯಕರು, ನಂತರ ಶಾಸಕರ ಕಛೇರಿ ಮುಂದೆ ಪ್ರತಿಭಟನೆ ಮಾಡಲು ಹಾಗೂ ಸಾಮಾಜಿಕ ಅಂತರ ಇಲ್ಲದೆ , ಮಾಸ್ಕ್ ಹಾಕದೆ ಕಾನೂನು ಮೀರಿ ಪ್ರತಿಭಟನೆ ಮಾಡಲು ಮುಂದಾದಾಗ ಪೊಲೀಸರು ತಡೆಯಲು ಪ್ರಯತ್ನಿಸಿದರು.

ಪೊಲೀಸರು ಮತ್ತು ಮಾಜಿ ಶಾಸಕ ವಸಂತ ಬಂಗೇರರ ಮದ್ಯೆ ಮಾತಿನ ಚಕಮಕಿ ನಡೆದು ಪ್ರತಿಭಟನಾಕಾರರು ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು ಎನ್ನಲಾಗಿದೆ. ಪೊಲೀಸರು ಮತ್ತು ಮಾಜಿ ಶಾಸಕರ ಮದ್ಯೆ ಮಾತಿನ ಚಕಮಕಿ ನಡೆದು ಪೊಲೀಸರನ್ನು ತಳ್ಳಿ ಪ್ರತಿಭಟನಾಕಾರರು ಶಾಸಕರ ಕಚೇರಿಗೆ ಹೋದರು.

- Advertisement -

Latest News

error: Content is protected !!