Friday, June 5, 2026
Homeಕರಾವಳಿಮಂಗಳೂರಿನ ಕಲಾವಿದ ಬಿಡಿಸಿದ ಎಸ್ ಪಿ ಬಾಲಸುಬ್ರಮಣ್ಯಂ ಅವರ ರಂಗೋಲಿ ಎಷ್ಟು ಅದ್ಭುತವಾಗಿದೆ ನೋಡಿ...

ಮಂಗಳೂರಿನ ಕಲಾವಿದ ಬಿಡಿಸಿದ ಎಸ್ ಪಿ ಬಾಲಸುಬ್ರಮಣ್ಯಂ ಅವರ ರಂಗೋಲಿ ಎಷ್ಟು ಅದ್ಭುತವಾಗಿದೆ ನೋಡಿ…

- Advertisement -
- Advertisement -

ಮಂಗಳೂರು : ಗಾನ ಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆುತ್ತಿರುವ ವಿಚಾರ ನಿಮಗೆಲ್ಲಾ ಗೊತ್ತೇ ಇದೆ. ಕಳೆದ ಎರಡು ವಾರಗಳಿಂದ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಹಾರೈಕೆಯಿಂದಾಗಿ ಇದೀಗ ಅವರ ಆರೋಗ್ಯ ಚೇತರಿಸುತ್ತಿದ್ದು, ಕೊರೊನಾ ವರದಿ ಕೂಡ ನೆಗೆಟಿವ್ ಬಂದಿದೆ.

#spbalasubramanya ಇವತ್ತು ನಾನು ಇವರ ರಂಗೋಲಿ ಬಿಡಿಸಿದೆ.ಆವಾಗಲೇ ಗುಡ್ ನ್ಯೂಸ್ ಬಂತು.ಕೋರೋನದಿಂದ ಗೆದ್ದು ಬಂದ್ರು ಅಂತ.ತುಂಬಾ ಖುಷಿ ಆಯಿತು….

Posted by Jayanth Salian on Sunday, 23 August 2020

ಹೀಗಿರುವಾಗಲೇ ಮಂಗಳೂರಿನ ಕಲಾವಿದ ಜಯಂತ್ ಸಾಲಿಯಾನ್ ಅವರು ಎಸ್ ಪಿ ಬಿ ಅವರ ರಂಗೋಲಿ ಬಿಡಿಸಿ ಅವರ ಶೀಘ್ರ ಚೇತರಿಕೆಗೆ ಶುಭ ಹಾರೈಸಿದ್ದಾರೆ. ಇದು ನಿಜಕ್ಕೂ ರಂಗೋಲಿಯ ಅಂತಾ ಎರಡೆರಡು ಬಾರಿ ಕಣ್ಣು ಮಿಟುಕಿಸದೇ ನೋಡುವಷ್ಟು ಅದ್ಭುತವಾಗಿದೆ ಈ ರಂಗೋಲಿ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಜಯಂತ್ ಅವರು ಈ ರಂಗೋಲಿಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಹಾಗೇ ರಂಗೋಲಿ ಬಿಡಿಸುತ್ತಿರುವ ವಿಡಿಯೋವನ್ನು ಕೂಡ ಅವರ ತಮ್ಮ ಯೂ ಟ್ಯೂಬ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಇಂತಹ ಅಪರೂಪದ ಪ್ರತಿಭೆಗಳು ನಮ್ಮ ಕರಾವಳಿಯಲ್ಲಿ ಇರೋದು ನಮಗೆಲ್ಲಾ ಹೆಮ್ಮೆ. ಅವರ ಕಲಾ ಪ್ರೀತಿಗೆ ನಮ್ಮದೊಂದು ಹ್ಯಾಟ್ಯಾಫ್…

- Advertisement -

Latest News

error: Content is protected !!