- Advertisement -
- Advertisement -
ಸುಳ್ಯ: ಮೂರು ದಿನಗಳ ಹಿಂದೆ ಪಯಸ್ವಿನಿ ನದಿ ಬಳಿ ಹುಲ್ಲು ಕೊಯ್ಯಲು ಹೋಗಿ ನಿಗೂಢವಾಗಿ ಕಣ್ಮರೆಯಾಗಿದ್ದ ಗಿರೀಶ್ (43) ಅವರ ಮೃತದೇಹ ಭಾನುವಾರ (ಆ. 30) ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶನಿವಾರ ಸಂಜೆಯವರೆಗೆ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದರೂ ಸುಳಿವು ಸಿಕ್ಕಿರಲಿಲ್ಲ. ಭಾನುವಾರ ಬೆಳಿಗ್ಗೆ ಕಾರ್ಯಾಚರಣೆ ಮುಂದುವರಿಸಿದ ಸ್ಥಳೀಯ ಮುಳುಗು ತಜ್ಞರಾದ ಪ್ರಗತಿ ಅಚ್ಚು ಮತ್ತು ಉಲ್ಲಾಸ್ ಮಿತ್ತಡ್ಕ ಕುದ್ಕೂಳಿ, ಗಿರೀಶ್ ಅವರ ಮೊಬೈಲ್ ಹಾಗೂ ಕತ್ತಿ ಸಿಕ್ಕಿದ್ದ ಸ್ಥಳದಿಂದ ಸುಮಾರು 1 ಕಿ.ಮೀ. ದೂರದಲ್ಲಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
- Advertisement -


