- Advertisement -
- Advertisement -
ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಸಕ್ತಿಕರ ತರಬೇತಿ ಅವಧಿಯಲ್ಲಾದ ದುರಂತವೊಂದರಲ್ಲಿ ಉಡುಪಿ ಮೂಲದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ (22) ಮೃತಪಟ್ಟಿದ್ದಾರೆ.
ಆಗಸ್ಟ್ 27 ರಂದು ಖಾಸಗಿ ಪೈಲಟ್ ತರಬೇತಿ ವೇಳೆ ಅವರು ಚಲಾಯಿಸುತ್ತಿದ್ದ ವಿಮಾನ ಪತನಗೊಂಡು ಈ ದುರಂತ ಸಂಭವಿಸಿದೆ. ಮೃತ ಅಭಿಷೇಕ್ ಅವರು ಕಳೆದ ಎರಡೂವರೆ ವರ್ಷಗಳಿಂದ ಕಾನ್ಪುರದಲ್ಲಿ ತರಬೇತಿ ಪಡೆಯುತ್ತಿದ್ದು, ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಕಣಜಾರು ಗ್ರಾಮದ ಕಡೇಬೆರ್ಕೆ ಮೂಲದ ಪ್ರಭಾಕರ ಪೂಜಾರಿ ಹಾಗೂ ಶಶಿಕಲ ದಂಪತಿಯ ಪುತ್ರರಾಗಿದ್ದಾರೆ.
ಅವರು ಆಗಾಗ್ಗೆ ಕಣಜಾರಿನಲ್ಲಿರುವ ತಮ್ಮ ತಾಯಿಯ ಸಹೋದರ ಜೀವನ್ ಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದರು. ದುರಂತದ ಮಾಹಿತಿ ತಿಳಿದ ತಕ್ಷಣವೇ ಕುಟುಂಬಸ್ಥರು ಕಾನ್ಪುರಕ್ಕೆ ಪ್ರಯಾಣಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳನ್ನು ಪೊಲೀಸರು ಮುಂದುವರಿಸಿದ್ದಾರೆ.
- Advertisement -


