- Advertisement -
- Advertisement -
ಮಂಗಳೂರಿನ ಕಸಬಾ ಬೆಂಗ್ರೆಯ ಫೆರಿ ಪಾಯಿಂಟ್ ಬಳಿ ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಿ ಕೊಡಲು ಹೋಗಿ ಈಜು ಬಲ್ಲ 25 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಕಸಬಾ ಬೆಂಗ್ರೆ ನಿವಾಸಿ ಮುಹಮ್ಮದ್ ಸನಾವುಲ್ಲ (25) ಮೃತಪಟ್ಟ ದುರ್ದೈವಿ.
ಇಂಟೀರಿಯರ್ ಡಿಸೈನಿಂಗ್ ಹಾಗೂ ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದ ಸನಾವುಲ್ಲಾ, ಭಾನುವಾರ ಸಂಜೆ ಮಕ್ಕಳು ಆಡುತ್ತಿದ್ದ ಫುಟ್ಬಾಲ್ ನದಿಗೆ ಬಿದ್ದಾಗ ಅದನ್ನು ತೆಗೆದುಕೊಡಲು ನೀರಿಗೆ ಇಳಿದಿದ್ದರು. ಈಜು ಗೊತ್ತಿದ್ದರೂ ನದಿಯ ತೀವ್ರ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ದಡಕ್ಕೆ ತಂದು ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಸನಾವುಲ್ಲಾ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
- Advertisement -


