Thursday, August 6, 2026
Homeಪ್ರಮುಖ-ಸುದ್ದಿ₹3 ಕೋಟಿ ವಂಚನೆ ಆರೋಪ: ನಟ ಸಲ್ಮಾನ್ ಖಾನ್, ಸಹೋದರಿ ಅಲ್ವಿರಾ ಖಾನ್‌ಗೆ ಚಂಡೀಗಢ ಕೋರ್ಟ್...

₹3 ಕೋಟಿ ವಂಚನೆ ಆರೋಪ: ನಟ ಸಲ್ಮಾನ್ ಖಾನ್, ಸಹೋದರಿ ಅಲ್ವಿರಾ ಖಾನ್‌ಗೆ ಚಂಡೀಗಢ ಕೋರ್ಟ್ ಸಮನ್ಸ್

- Advertisement -
- Advertisement -

ಬಾಲಿವುಡ್ ನಟ ಸಲ್ಮಾನ್ ಖಾನ್, ಅವರ ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಹಾಗೂ ‘ಸ್ಟೈಲ್ ಅಂಡ್ ಕಂಟೆಂಟ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ನಿರ್ದೇಶಕರಿಗೆ ಚಂಡೀಗಢ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ₹3 ಕೋಟಿ ಮೌಲ್ಯದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಎಲ್ಲಾ ಆರೋಪಿಗಳು ಅಕ್ಟೋಬರ್ 5 ರಂದು ನ್ಯಾಯಾಲಯದ ಮುಂಭಾಗ ಹಾಜರಾಗುವಂತೆ ಸೂಚಿಸಲಾಗಿದೆ.

ಈ ಕಾನೂನು ಕ್ರಮವು ಚಂಡೀಗಢ ಮೂಲದ ಉದ್ಯಮಿ ಅರುಣ್ ಗುಪ್ತಾ ನೀಡಿರುವ ದೂರಿನ ಆಧಾರದ ಮೇಲೆ ಕೈಗೊಳ್ಳಲಾಗಿದೆ. ಮಣಿಮಾಜ್ರಾದಲ್ಲಿ ‘ಬೀಯಿಂಗ್ ಹ್ಯೂಮನ್ ಜ್ಯುವೆಲ್ಲರಿ’ ಶೋರೂಮ್ ಸ್ಥಾಪಿಸಲು ತಮ್ಮನ್ನು ವಂಚಿಸಲಾಗಿದೆ ಎಂದು ಅರುಣ್ ಆರೋಪಿಸಿದ್ದಾರೆ. ‘ಬೀಯಿಂಗ್ ಹ್ಯೂಮನ್’ ಜ್ಯುವೆಲ್ಲರಿ ಬ್ರಾಂಡ್ ಮಾರಾಟದ ಪರವಾನಗಿ ಹೊಂದಿದ್ದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು, ಈ ಉದ್ಯಮಕ್ಕಾಗಿ ₹3 ಕೋಟಿ ಹೂಡಿಕೆ ಮಾಡಿದ್ದಾಗಿ ಹಾಗೂ ಶೋರೂಮ್ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ ₹1 ಕೋಟಿ ಖರ್ಚು ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಒಪ್ಪಂದದ ನಂತರ ಸಂಸ್ಥೆಯು ಉದ್ಯಮಕ್ಕೆ ನೀಡಬೇಕಾಗಿದ್ದ ಯಾವುದೇ ಬೆಂಬಲವನ್ನು ನೀಡದೆ ಮಾತು ತಪ್ಪಿದೆ. ಮುಖ್ಯವಾಗಿ, ಶೋರೂಮ್‌ಗೆ ಜ್ಯುವೆಲ್ಲರಿ ಪೂರೈಸಬೇಕಾಗಿದ್ದ ಸಂಸ್ಥೆಯು ಫೆಬ್ರವರಿ 2020 ರಿಂದ ಮುಚ್ಚಲ್ಪಟ್ಟಿದ್ದರಿಂದ ಆಭರಣಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಭಾರಿ ನಷ್ಟ ಸಂಭವಿಸಿದೆ. ಅಲ್ಲದೆ, ಉದ್ಯಮದ ಉದ್ಘಾಟನೆಯನ್ನು ಸಲ್ಮಾನ್ ಖಾನ್ ಅವರೇ ಮಾಡಲಿದ್ದಾರೆ ಎಂದು ನಂಬಿಸಿ, ಕೊನೆಗೆ ಅವರ ಬದಲು ಭಾವ ಆಯುಷ್ ಶರ್ಮಾ ಅವರಿಂದ ಉದ್ಘಾಟನೆ ಮಾಡಿಸಿ ಕಂಪನಿಯ ಪ್ರತಿನಿಧಿಗಳು ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.

- Advertisement -

Latest News

error: Content is protected !!