Wednesday, August 5, 2026
HomeUncategorizedನವದೆಹಲಿಯಲ್ಲಿ ನೀಟ್ ಪ್ರತಿಭಟನೆ ವೇಳೆ ಉಗ್ರರ ದಾಳಿಗೆ ಸಂಚು

ನವದೆಹಲಿಯಲ್ಲಿ ನೀಟ್ ಪ್ರತಿಭಟನೆ ವೇಳೆ ಉಗ್ರರ ದಾಳಿಗೆ ಸಂಚು

- Advertisement -
- Advertisement -

ನವದೆಹಲಿ: ನೀಟ್ ಪರೀಕ್ಷೆ ವಿಚಾರವಾಗಿ ಇತ್ತೀಚೆಗೆ ನಡೆದಿದ್ದ ನವದೆಹಲಿಯ ಜಂತರ್ ಮಂತರ್‌ನಲ್ಲಿ ಉಗ್ರರು ದಾಳಿಗೆ ಸಂಚು ನಡೆಸಿದ್ದ ವಿಚಾರ ಬಯಲಾಗಿದೆ.

ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಎರಡು ಉಗ್ರ ಜಾಲವನ್ನು ಮಟ್ಟ ಹಾಕಿರುವ ಪಂಜಾಬ್ ಪೊಲೀಸರು ಸಂಚು ಭಗ್ನಗೊಳಿಸಿದ್ದಾರೆ. ಇದರ ಜೊತೆಗೆ ನಾಲ್ವರು ಅಪ್ರಾಪ್ತರು ಸೇರಿದಂತೆ ಒಟ್ಟು ಒಂಬತ್ತು ಉಗ್ರರನ್ನು ಬಂಧನ ಮಾಡಲಾಗಿದೆ.

ಅಪ್ರಾಪ್ತರಿಗೆ ಹಣದ ಆಮಿಷ ಒಡ್ಡಿ ಪೆಟ್ರೋಲ್ ಬಾಂಬ್ ತಯಾರಿಕೆಗೆ ತರಬೇತಿ ನೀಡಲಾಗಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ತಂದು ದೆಹಲಿಯಲ್ಲಿ ದಾಳಿಗೆ ಸಂಚು ನಡೆಸಲಾಗಿತ್ತು.

ಅದರೆ ನೀಟ್ ಪ್ರತಿಭಟನೆ ವೇಳೆ ಜಂತರ್ ಮಂತರ್ ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಿಂದಾಗಿ ಉಗ್ರರ ಪ್ಲಾನ್ ಸಫಲವಾಗಿಲ್ಲ. ಉಗ್ರರ ಪಾಕಿಸ್ತಾನ ಸಂಪರ್ಕ ಮತ್ತು ಶಸ್ತ್ರಾಸ್ತ್ರ ಸರಬರಾಜುದಾರರ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

- Advertisement -

Latest News

error: Content is protected !!