Saturday, July 18, 2026
Homeಕರಾವಳಿಉಡುಪಿಕಾರ್ಕಳ : ದೇವಸ್ಥಾನದ ಖಾತೆಯ ಚೆಕ್ ದುರುಪಯೋಗ ಯತ್ನ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು

ಕಾರ್ಕಳ : ದೇವಸ್ಥಾನದ ಖಾತೆಯ ಚೆಕ್ ದುರುಪಯೋಗ ಯತ್ನ ಪ್ರಕರಣ; ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಕಾರ್ಕಳ : ದೇವಸ್ಥಾನದ ಖಾತೆಯ ಚೆಕ್ ದುರುಪಯೋಗಪಡಿಸಲು ಪ್ರಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಂಪ್ಯೂಟರ್ ಆಪರೇಟರ್ ಮರ್ಣೆ ಗ್ರಾಮದ ಎಣ್ಣೆಹೊಳೆ ಹಂಚಿಕಟ್ಟೆ ನಿವಾಸಿ ಅಕ್ಷಯ ದೇವಾಡಿಗ (29) ಬಂಧಿತ.

ಈತಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಬ್ಯಾಂಕ್ ಖಾತೆಯ ಚೆಕ್ ಕಳವುಗೈದು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರ ನಕಲಿ ಸಹಿ ಬಳಸಿ ಹಣ ಡ್ರಾ ಮಾಡಲು ವಿಫಲ ಯತ್ನ ನಡೆಸಿದದ್ದ ಎನ್ನಲಾಗಿದೆ.

ಅಕ್ಷಯ ದೇವಾಡಿಗ ಕಳೆದ 4 ವರ್ಷಗಳಿಂದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಈ ಅವಧಿಯಲ್ಲಿ ಸೇವಾ ರೂಪದಲ್ಲಿ ಸಂಗ್ರಹವಾದ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಈ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಕಂಡಬಂದಿತ್ತು. ಅಕ್ರಮ ನಡೆದ ಕುರಿತು ಅಕ್ಷಯ ಬಳಿ ವಿವರಣೆ ಕೇಳಿದಾಗ ಆತ ಮಾಹಿತಿ ನೀಡದೇ ಮೇ 7 ರಂದು ಕೆಲಸಕ್ಕೆ ರಾಜೀನಾಮೆ ಪತ್ರ ನೀಡಿ ಕೆಲಸಕ್ಕೆ ಗೈರಾಗಿದ್ದ. ಆತ ರಾಜೀನಾಮೆ ನೀಡುವ ಸಂದರ್ಭದಲ್ಲಿ ಐಓಬಿ ಬ್ಯಾಂಕಿನಲ್ಲಿದ್ದ ದೇವಸ್ಥಾನದ ಎರಡು ಖಾತೆಗಳ ಒಟ್ಟು 6 ಚೆಕ್ ಗಳನ್ನು ಕಳವುಗೈದು ತನ್ನ ಬಳಿ ಇರಿಸಿಕೊಂಡು, ತದನಂತರ ಜೂ. 24 ರಂದು ಬುಧವಾರ ಚೆಕ್ ಗಳನ್ನು ನಗದೀಕರಣ ಮಾಡಲು ಬ್ಯಾಂಕಿಗೆ ಬಂದಿದ್ದ. ಈ ಸಂದರ್ಭದಲ್ಲಿ ಸಹಿ ಕುರಿತು ಬ್ಯಾಂಕ್ ಸಿಬ್ಬಂದಿ ಅನುಮಾನಗೊಂಡು ಚೆಕ್ ನಗದೀಕರಣಕ್ಕೆ ನಿರಾಕರಿಸಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾರೆ. ಆರೋಪಿ ಅಕ್ಷಯ ದೇವಾಡಿಗ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ನಕಲಿ ಸಹಿ ಮಾಡಿ ಹಣ ಎಗರಿಸಲು ಯತ್ನಿಸಿದ್ದ. ಆತನ ವಿರುದ್ಧ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಬಂಗೇರ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!