Tuesday, June 23, 2026
Homeಮನರಂಜನೆನವಿಲು ಡ್ಯಾನ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಬಿಗ್ ಬಾಸ್ ಖ್ಯಾತಿಯ ಕಿಶನ್ ಹಾಗೂ ನಿವೇದಿತಾ ಗೌಡ

ನವಿಲು ಡ್ಯಾನ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ ಬಿಗ್ ಬಾಸ್ ಖ್ಯಾತಿಯ ಕಿಶನ್ ಹಾಗೂ ನಿವೇದಿತಾ ಗೌಡ

- Advertisement -
- Advertisement -

ಬೆಂಗಳೂರು; ಸುಮ್ನೆ ಇರಲಾರದವರು ಇರುವೆ ಬಿಟ್ಟುಕೊಂಡ್ರು ಅನ್ನೋ ಹಾಗಾಗಿದೆ ಬಿಗ್ ಬಾಸ್ ಖ್ಯಾತಿಯ ಕಿಶನ್ ಹಾಗೂ ನಿವೇದಿತಾ ಗೌಡ ಕಥೆ. ನಿವೇದಿತಾ ಗೌಡ ಕಿಶನ್ ಜೊತೆ ಹೇ ನವಿಲೇ ಹಾಡಿಗೆ ಮಾದಕವಾಗಿ ಹೆಜ್ಜೆ ಹಾಕಿ ಸಂಕಷ್ಟಕ್ಕೆ ಈಡಾಗಿದ್ದಾರೆ.ಹೇ ನವಿಲೇ ಹಾಡಿಗೆ ನವಿಲು ಗರಿ ಧರಿಸಿ ಡ್ಯಾನ್ಸ್ ಮಾಡಿದ್ದರು. ಇದೀಗ ಈ ಸಂಬಂಧ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.  ದೂರಿನಲ್ಲಿ, ರೀಲ್ಸ್ ಮಾಡುವಾಗ ಯಥೇಚ್ಛವಾಗಿ ನವಿಲುಗರಿ ಬಳಸಿದ್ದಾರೆ. ಹೀಗಾಗಿ ಇದನ್ನು ತನಿಖೆ ಮಾಡುವಂತೆ ಉಲ್ಲೇಖಿಸಿದ್ದಾರೆ.

ರೀಲ್ಸ್ ನಲ್ಲಿ ಇಬ್ಬರು ನವಿಲು ಗರಿ ಬಳಸಿ ಮಾಡಲಾದ ಉಡುಗೆಯನ್ನು ಧರಿಸಿ ಸಖತ್ತಾಗಿ ಮಿಂಚಿದ್ದರು. ಸರಳ, ಆಕರ್ಷಕ ಹೆಜ್ಜೆಯೊಂದಿಗೆ ರೀಲ್ಸ್‌ಗೆ ಹೆಜ್ಜೆ ಹಾಕಿದ್ದರು. ಮೈಗೆ ನವಿಲಿನ ಬಣ್ಣವನ್ನೇ ಪೇಂಟ್ ಮಾಡಿಕೊಂಡಿದ್ರೆ, ನಿವೇದಿತಾ ಅದೇ ಬಣ್ಣದ ವೆಲ್ವೆಟ್ ಕಲರ್ ಸ್ಕರ್ಟ್ ಧರಿಸಿ, ಮಾದಕ ಹೆಜ್ಜೆ ಹಾಕಿದ್ದರು. ರೀಲ್ಸ್ ಅಪ್‌ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸಿಕ್ಕಾಪಟ್ಟೆ ವೀವ್ಸ್ ಕೂಡ ಪಡೆದುಕೊಂಡಿತ್ತು. ಸದ್ಯ ಇಬ್ಬರು ತಮ್ಮ ಅಕೌಂಟ್‌ನಿಂದ ಈ ರೀಲ್‌ನ್ನು ಡಿಲೀಟ್‌ ಮಾಡಿದ್ದಾರೆ.ಅಲ್ಲದೇ ವಿಚಾರಣೆಗೂ ಹಾಜರಾಗಿದ್ದಾರೆ ಎನ್ನಲಾಗಿದೆ.

ಇನ್ನು ನೋಟಿಸ್ ಸ್ವೀಕರಿಸಿದ ನಂತರ ನಿವೇದಿತಾ ಗೌಡ ಮತ್ತು ಕಿಶನ್ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ವಿಭಾಗದ ಕಚೇರಿಗೆ ಭೇಟಿ ನೀಡಿ, ಹೇಳಿಕೆ ನೀಡಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!