Thursday, June 18, 2026
Homeತಾಜಾ ಸುದ್ದಿಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆ ಫಲಿತಾಂಶ ಪ್ರಕಟ; ಕಾಂಗ್ರೆಸ್‌ 5 ಸ್ಥಾನ, ಬಿಜೆಪಿ 2 ಸ್ಥಾನ,...

ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆ ಫಲಿತಾಂಶ ಪ್ರಕಟ; ಕಾಂಗ್ರೆಸ್‌ 5 ಸ್ಥಾನ, ಬಿಜೆಪಿ 2 ಸ್ಥಾನ, ಜೆಡಿಎಸ್ ಗೆ ಸೋಲು

- Advertisement -
- Advertisement -

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು,  ಕಾಂಗ್ರೆಸ್‌ 5 ಸ್ಥಾನ, ಬಿಜೆಪಿ 2 ಸ್ಥಾನ, ಜೆಡಿಎಸ್ ಗೆ ಸೋಲಾಗಿದೆ.

ಇಂದು ವಿಧಾನಸೌಧದಲ್ಲಿ ಬೆಳಿಗ್ಗೆ 9 ರಿಂದ ಮತದಾನ ಆರಂಭವಾಯಿತು. ಸಂಜೆ ಮತ ಎಣಿಕೆ ನಡೆಯಿತು. ಈ ವೇಳೆ ಕಾಂಗ್ರೆಸ್‌ 4 ಹಾಗೂ ಬಿಜೆಪಿ 2 ಸ್ಥಾನ ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು. 1 ಸ್ಥಾನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆ ಇತ್ತು. ಕೊನೆಗೆ ಕಾಂಗ್ರೆಸ್‌ನ ಅಭ್ಯರ್ಥಿ ವಿನಯ್ ಕಾರ್ತಿಕ್‌ ಗೆಲುವು ಸಾಧಿಸಿದ್ದು, ಜೆಡಿಎಸ್‌ನ ಗೋವಿಂದರಾಜು ಸೋತಿದ್ದಾರೆ.

ಕಾಂಗ್ರೆಸ್‌ನಿಂದ ಬಿ ಕೆ ಹರಿಪ್ರಸಾದ್, ತಿಪ್ಪಣ್ಣಪ್ಪ ಕಾಮಕನೂರ್, ಪಿ.ವಿ ಮೋಹನ್, ವಿನಯ್ ಕಾರ್ತಿಕ್‌, ಶಿವಣ್ಣ ಮಳವಳ್ಳಿ ಸೇರಿ 5 ಮಂದಿ ಗೆಲುವು ಸಾಧಿಸಿ ಪರಿಷತ್‌ಗೆ ಆಯ್ಕೆಯಾಗಿದ್ದಾರೆ.. ಬಿಜೆಪಿಯಿಂದ ರಘು ಕೌಟಿಲ್ಯ ಮತ್ತು ಲಿಂಗರಾಜ್ ಪಾಟೀಲ್ ಗೆದ್ದು ಕಾಲಿಟ್ಟಿದ್ದಾರೆ.

- Advertisement -

Latest News

error: Content is protected !!