Monday, June 22, 2026
Homeಕರಾವಳಿಮಂಗಳೂರುವಿಟ್ಲ; ಬ್ಯಾಕ್ಸೈಟ್ ಲಾರಿ ದುರಸ್ಥಿ ವೇಳೆ ಏಕಾಏಕಿ ಚಲಿಸಿ ಚಾಲಕನ ಮೇಲೆ ಹರಿದ ಲಾರಿ; ಚಾಲಕ...

ವಿಟ್ಲ; ಬ್ಯಾಕ್ಸೈಟ್ ಲಾರಿ ದುರಸ್ಥಿ ವೇಳೆ ಏಕಾಏಕಿ ಚಲಿಸಿ ಚಾಲಕನ ಮೇಲೆ ಹರಿದ ಲಾರಿ; ಚಾಲಕ ಸ್ಥಳದಲ್ಲೇ ಸಾವು

- Advertisement -
- Advertisement -

ವಿಟ್ಲ; ಬ್ಯಾಕ್ಸೈಟ್ ಗಣಿಗಾರಿಕೆ ಜಾಗದಲ್ಲಿ ಬಾಕ್ಸೈಟ್ ಲಾರಿ ದುರಸ್ಥಿ ವೇಳೆ ಲಾರಿ ಏಕಾಏಕಿ ಚಲಿಸಿ ಚಾಲಕನ ಮೇಲೆ ಹರಿದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕನ್ಯಾನ ಗ್ರಾಮದ ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಧರ್ಮಸ್ಥಳದ ಮಹೇಶ್ ಮೃತ ಚಾಲಕ.

ಪಾದೆಕಲ್ಲು ಪೆರೋಡಿ ಸರವು ಗುಡ್ಡೆ ಎಂಬಲ್ಲಿ ಅಕ್ರಮವಾರಿ ಬಾಕ್ಸೈಟ್ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಲಾಗಿದ್ದು, ಇಲ್ಲಿ ಬಾಕ್ಸೈಟ್ ಸಾಗಾಣಿಕೆಗೆ ಬಂದ ರ ಲಾರಿಯೊಂದರಲ್ಲಿ  ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನು ಸರಿಪಡಿಸಲು ಚಾಲಕ ಮಹೇಶ್ ಅವರು ಲಾರಿಯ ಕೆಳಗೆ ಹೋಗಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ, ಲಾರಿ ಏಕಾಏಕಿ ಚಲಿಸಿ ಅವರ ಮೇಲೆ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 ಘಟನೆ ನಡೆದ ತಕ್ಷಣ ಸ್ಥಳೀಯ ಕಾರ್ಮಿಕರು ಹಾಗೂ ಕನ್ಯಾನದ ಸದ್ದುರು ಅಂಬ್ಯುಲೆನ್ಸ್ ಚಾಲಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಲಾರಿಯ ಅಡಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಮೃತದೇಹವನ್ನು ವಿಟ್ಲದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳೀಯರು ಅಕ್ರಮ ಬಾಕ್ಸೈಟ್ ದಂಧೆ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

- Advertisement -

Latest News

error: Content is protected !!