Tuesday, June 16, 2026
HomeWorldಜೂನ್ 21ರಂದು NEET (UG) ಮರುಪರೀಕ್ಷೆ: ಭಾರತದಲ್ಲಿ ಜೂನ್ 22ರವರೆಗೆ ಟೆಲಿಗ್ರಾಮ್ ನಿರ್ಬಂಧ

ಜೂನ್ 21ರಂದು NEET (UG) ಮರುಪರೀಕ್ಷೆ: ಭಾರತದಲ್ಲಿ ಜೂನ್ 22ರವರೆಗೆ ಟೆಲಿಗ್ರಾಮ್ ನಿರ್ಬಂಧ

- Advertisement -
- Advertisement -

ಹೊಸದಿಲ್ಲಿ: ಜೂನ್ 21ರಂದು ನಡೆಯಲಿರುವ NEET(UG)–2026 ಮರುಪರೀಕ್ಷೆಯನ್ನು ಸುರಕ್ಷಿತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ಅನ್ನು ಜೂನ್ 22ರವರೆಗೆ ನಿರ್ಬಂಧಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಐಟಿ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಈ ಕಠಿಣ ಆದೇಶ ಹೊರಡಿಸಿದ್ದು, ಪ್ರಶ್ನೆಪತ್ರಿಕೆ ಸೋರಿಕೆ, ಸುಳ್ಳು ಮಾಹಿತಿ ಪ್ರಸಾರ ಹಾಗೂ ಸಂಘಟಿತ ವಂಚನೆಗಳನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.

ಇದರೊಂದಿಗೆ, ಪರೀಕ್ಷೆಯ ನಂತರ ಸಂದೇಶಗಳ ಸಮಯ ಹಾಗೂ ವಿಷಯವನ್ನು ಬದಲಾಯಿಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಸುಳ್ಳು ಪುರಾವೆಗಳನ್ನು ಸೃಷ್ಟಿಸುವುದನ್ನು ತಡೆಯಲು, ಟೆಲಿಗ್ರಾಮ್‌ನ ‘ಮೆಸೇಜ್ ಎಡಿಟ್’ ಸೌಲಭ್ಯವನ್ನು ಕೂಡ ಜೂನ್ 30ರವರೆಗೆ ಭಾರತದೊಳಗೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.

NEET ಮರುಪರೀಕ್ಷೆಯ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡಿರುವ ವಂಚನಾ ಜಾಲಗಳನ್ನು ಮಟ್ಟಹಾಕಲು ಈ ಕ್ರಮಗಳು ನೆರವಾಗಲಿವೆ ಎಂದು NTA ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Latest News

error: Content is protected !!