Thursday, June 18, 2026
Homeಕರಾವಳಿಮಂಗಳೂರು ಉದ್ಯಮಿ ಯಶೋಧಾ ರಾಜೇಶ್ ಗೆ ಥೈಲ್ಯಾಂಡ್ ನಲ್ಲಿ Mrs Tourism Internaional 2026...

ಮಂಗಳೂರು ಉದ್ಯಮಿ ಯಶೋಧಾ ರಾಜೇಶ್ ಗೆ ಥೈಲ್ಯಾಂಡ್ ನಲ್ಲಿ Mrs Tourism Internaional 2026 ಪ್ರಶಸ್ತಿ

- Advertisement -
- Advertisement -

ಮಂಗಳೂರು ಉದ್ಯಮಿ ಯಶೋಧಾ ರಾಜೇಶ್ ಥೈಲ್ಯಾಂಡ್ ಹುವಾ ಹಿನ್‌ನಲ್ಲಿ ನಡೆದ Mrs Tourism Internaional 2026ನಲ್ಲಿ Mrs Tourism International Talent Queen 2026 ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜಗತ್ತಿನ ವಿವಿಧ ದೇಶಗಳ 22 ಸ್ಪರ್ಧಿಗಳು ಭಾಗವಹಿಸಿದ್ದ ಈ ಕಠಿಣ ಪೈಪೋಟಿಯಲ್ಲಿ ಯಶೋಧಾ ಅವರು ಪ್ರದರ್ಶಿಸಿದ ‘ಅರ್ಧನಾರೀಶ್ವರ’ ನೃತ್ಯ ರೂಪಕವು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಕಲಾತ್ಮಕತೆಯನ್ನು ಎತ್ತಿ ತೋರಿಸುತಿತ್ತು.

ಶಿವ ಮತ್ತು ಪಾರ್ವತಿಯ ದೈವಿಕ ಏಕತೆಯನ್ನು ಅತ್ಯಂತ ನಾಜೂಕಾಗಿ ಪ್ರತಿಬಿಂಬಿಸಿದ ಈ ಕಲಾ ಪ್ರದರ್ಶನಕ್ಕೆ ಅಂತರರಾಷ್ಟ್ರೀಯ ತೀರ್ಪುಗಾರರು ಹಾಗೂ ಪ್ರೇಕ್ಷಕರು ಎದ್ದುನಿಂತು ಗೌರವ ಸೂಚಿಸಿದ್ದಾರೆ. ಮಂಗಳೂರಿನ ‘ಪಾತ್‌ವೇ ಮಾಡೆಲಿಂಗ್ ಸ್ಟುಡಿಯೋ’ ಆರಂಭಿಕ ದಿನಗಳಿಂದ ರ‍್ಯಾಂಪ್ ವಾಕ್, ವೇದಿಕೆಯ ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನದ ಮೂಲ ತರಬೇತಿಯನ್ನು ನೀಡಿದೆ. ಇವರನ್ನು ಅಂತರರಾಷ್ಟ್ರೀಯ ವೇದಿಕೆಗೆ ಸಜ್ಜುಗೊಳಿಸಲು ‘ಆಸ್ಟ್ರಲ್ ಪೇಜೆಂಟ್ಸ್’ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿಯಾದ ಪ್ರತಿಭಾ ಸೌಂಶಿಮಠ್ ಅವರು ನೇರ ಮಾರ್ಗದರ್ಶನ ನೀಡಿದ್ದು, ಜಾಗತಿಕ ಮಟ್ಟದ ಪ್ರಶ್ನೋತ್ತರ ಸರಣಿಗಳನ್ನು ಎದುರಿಸುವ ವಿಶೇಷ ಕೋಚಿಂಗ್ ನೀಡಿದ್ದರು.

- Advertisement -

Latest News

error: Content is protected !!