ಬೆಳ್ತಂಗಡಿ : ಸ್ವಪಕ್ಷದ ಕಾರ್ಯಕರ್ತನೊಬ್ಬನಿಗೆ ಶಾಸಕ ಹರೀಶ್ ಪೂಂಜ ಅವರ ಆಪ್ತ ಸಹಾಯಕರದ್ದು ಎನ್ನಲಾದ ಅಶ್ಲೀಲವಾಗಿ ಬೆದರಿಕೆ ಹಾಕಿರುವ ಆಡಿಯೋ ತುಣುಕುಗಳು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ವಿಚಾರದಿಂದ ಬೆಳ್ತಂಗಡಿ ಶಾಸಕರಿಗೆ ಮುಜುಗರ ಉಂಟಾಗಿದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ಅವರ ಆಪ್ತ ಸಹಾಯಕರಾಗಿರುವ ವಿನೋದ್ ರಾಜ್ ಕಲ್ಮಂಜ ಎಂಬವರು ನೆಲ್ಯಾಡಿಯಲ್ಲಿ ಚೇತನ್ ಫಾರ್ಮ ಏಜೆನ್ಸಿ ಹೊಂದಿರುವ ಪಟ್ರಮೆ ನಿವಾಸಿ ಬಿಜೆಪಿ ಕಾರ್ಯಕರ್ತನಾಗಿರುವ ಯುಕೇಶ್ ಎಂಬಾತನಿಗೆ ವಾಟ್ಸಾಪ್ ಮೂಲಕ ಅಶ್ಲೀಲ ಪದಗಳಿಂದ ಬೈದು ಬೆದರಿಕೆ ಹಾಕಿರುವ ಹತ್ತಕ್ಕೂ ಅಧಿಕ ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚುನಾವಣೆ ಬಗ್ಗೆ ಯುಕೇಶ್ ಪಟ್ರಮೆ ತನ್ನ ಸಾಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ಬಿಜೆಪಿ ಬಗ್ಗೆ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಈ ರೀತಿಯಲ್ಲಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಅದಲ್ಲದೆ ಇಲ್ಲಸಲ್ಲದ ಆರೋಪ ಮಾಡಿ ಅಸಹ್ಯವಾಗಿ ಮೆಸೇಜ್ ಮಾಡಿ ಕೂಡ ಬೆದರಿಕೆ ಹಾಕಿರುವ ಸ್ಕ್ರೀನ್ ಶಾಟ್ ,ಚೇತನ್ ಫಾರ್ಮ ಏಜೆನ್ಸಿ ರಿವಿವ್ ನಲ್ಲಿ ಕೂಡ ಪೋಸ್ಟ್ ಹಾಕಲಾದ ಬಗ್ಗೆ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇನ್ನೂ ಆಪ್ತ ಸಹಾಯಕನ ಬೆದರಿಕೆ ಹಾಕಿರುವ ಆಡಿಯೋಗಳು ವೈರಲ್ ಆಗಿರುವ ವಿಚಾರದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಆಪ್ತ ಸಹಾಯಕ ವಿನೋದ್ ರಾಜ್ ವಿರುದ್ಧ ಯಾವ ಕ್ರಮಕ್ಕೆ ಮುಂದಾಗುತ್ತಾರೆ ಎಂದು ಕಾದು ನೋಡಬೇಕಾಗಿದೆ.


