- Advertisement -
![]()
- Advertisement -
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದೆ. ಲೀಟರ್ ಗೆ ತಲಾ ಮೂರು ರೂಪಾಯಿಯಷ್ಟು ಬೆಲೆ ಏರಿಕೆ ಆಗಿದೆ.
ಇಂದು ಬೆಳಗ್ಗೆಯಿಂದಲೇ ದರ ಏರಿಕೆ ಅನ್ವಯವಾಗಲಿದ್ದು, ಸಿಎನ್ ಜಿ ದರ ಕೂಡಾ ಕೆಜಿಗೆ ಎರಡು ರೂಪಾಯಿ ಹೆಚ್ಚಳವಾಗಿದೆ.
ಆಯಾ ರಾಜ್ಯಗಳಲ್ಲಿನ ಸ್ಥಳೀಯ ತೆರಿಗೆಗಳನ್ನು ಆಧರಿಸಿ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ವ್ಯತ್ಯಾಸ ಇರಲಿದೆ. ಕೆಲವು ದಿನಗಳ ಹಿಂದಷ್ಟೇ ಮಿತವ್ಯಯದ ಕರೆಯ ಮೂಲಕ ಪ್ರಧಾನಿ ನರೇಂದ್ರ ಮೋದಿ ದರ ಏರಿಕೆಯ ಪರೋಕ್ಷ ಸುಳಿವು ನೀಡಿದ್ದರು.
ಮಧ್ಯ ಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಾಗಿ ಇಂಧನ ದರ ಏರಿಕೆಯಾಗಿದ್ದು, ಇಂದಿನಿಂದಲೇ ಬೆಲೆ ಹೆಚ್ಚಳ ಜಾರಿಗೆ ಬರಲಿದೆ.
- Advertisement -


