- Advertisement -
![]()
- Advertisement -
ಬೆಂಗಳೂರು: ಮದ್ಯದ ಅಮಲಿನಲ್ಲಿ ಯುವಕ-ಯುವತಿಯರ ಗುಂಪೊಂದು ಬೀದಿ ಜಗಳಕ್ಕಿಳಿದು ಭಾರೀ ಹೈಡ್ರಾಮಾ ಸೃಷ್ಟಿಸಿದ ಘಟನೆ ಕೋರಮಂಗಲದಲ್ಲಿ ತಡರಾತ್ರಿ ನಡೆದಿದೆ.
ನೇಪಾಳ ಮತ್ತು ಕೇರಳ ಮೂಲದ ಯುವಕ-ಯುವತಿ ಮಧ್ಯವನ್ನು ಸೇವಿಸಿ ಗಲಾಟೆ ಮಾಡುತ್ತಿರುವುದು ಶನಿವಾರ ತಡರಾತ್ರಿ ಸುಮಾರು 1:35 ರ ಸುಮಾರಿಗೆ ಕಂಡುಬಂದಿದೆ. ಆರಂಭದಲ್ಲಿ ಸಣ್ಣದಾಗಿ ಶುರುವಾದ ಮಾತಿನ ಚಕಮಕಿ, ನೋಡನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿ ದೈಹಿಕ ಹಲ್ಲೆಯ ಮಟ್ಟಕ್ಕೆ ತಲುಪಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದರೂ ಸಹ, ಮದ್ಯದ ಅಮಲಿನಲ್ಲಿದ್ದ ಯುವತಿ ಯುವಕನ ಮೇಲೆ ಹಲ್ಲೆ ನಡೆಸಿರುವುದು ಕಂಡು ಬಂದಿದೆ.
- Advertisement -


