ಮುಂಬೈ: ಇಲ್ಲಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀ ಭೀಮೇಶ್ವರ ಸದ್ಗುರು ನಿತ್ಯಾನಂದ ಸಂಸ್ಥಾನದ ಮೂಲ ವಿಗ್ರಹದ ನವೀಕರಣ ಕಾರ್ಯವು ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ದರ್ಶನಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.

ಸಂಸ್ಥಾನದ ಪ್ರಕಟಣೆಯ ಪ್ರಕಾರ, ಪರಮ ಪೂಜ್ಯ ಶ್ರೀ ನಿತ್ಯಾನಂದ ಬಾಬಾ ಅವರ ಮೂಲ ವಿಗ್ರಹದ ಪುನಶ್ಚೇತನ ಕಾರ್ಯವು ಸುಗಮವಾಗಿ ನಡೆಯಬೇಕಾಗಿರುವುದರಿಂದ 27 ಏಪ್ರಿಲ್ 2026 ರಿಂದ 25 ಮೇ 2026 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧವನ್ನು ಹೇರಲಾಗಿದೆ.
ಇನ್ನು ಭಕ್ತರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಮೂಲ ವಿಗ್ರಹದ ದರ್ಶನ ಲಭ್ಯವಿಲ್ಲದಿದ್ದರೂ, ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಉತ್ಸವ ಮೂರ್ತಿ ಹಾಗೂ ಬಾಬಾ ಅವರ ಪವಿತ್ರ ಪಾದುಕೆಗಳ ದರ್ಶನ ಪಡೆಯಬಹುದು. ಇನ್ನು ದೇವಸ್ಥಾನದ ದೈನಂದಿನ ಪೂಜಾ ವಿಧಿವಿಧಾನಗಳು ಹಾಗೂ ಆರತಿಗಳು ಯಾವುದೇ ಅಡೆತಡೆಯಿಲ್ಲದೆ ಎಂದಿನಂತೆ ನಡೆಯಲಿವೆ.
ಮೇ 25ರ ನಂತರ ನವೀಕರಣ ಕಾರ್ಯ ಪೂರ್ಣಗೊಂಡು, ಮೂಲ ವಿಗ್ರಹದ ದರ್ಶನವು ಭಕ್ತರಿಗೆ ಪುನಃ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.


