Thursday, June 4, 2026
Homeತಾಜಾ ಸುದ್ದಿಮಗ-ಸೊಸೆ ಸೆಕ್ಸ್ ಮಾಡಬಾರದೆಂದು ಮಾವ ಮಾಡಿದ ಹೊಸ ಉಪಾಯ !

ಮಗ-ಸೊಸೆ ಸೆಕ್ಸ್ ಮಾಡಬಾರದೆಂದು ಮಾವ ಮಾಡಿದ ಹೊಸ ಉಪಾಯ !

- Advertisement -
- Advertisement -

ಅಹಮದಾಬಾದ್: ತನ್ನ ಮಗ ಮತ್ತು ಸೊಸೆ ಬೆಡ್ ರೂಮ್ ನಲ್ಲಿ ಒಂದಾಗಬಾರೆದೆಂಬ ಕಾರಣಕ್ಕೆ ಸೊಸೆಗೆ ದೆವ್ವ ಹಿಡಿದಿದೆ ಎಂದು ಹೇಳಿ, ಆಕೆ ತನ್ನ ಪತಿಯೊಂದಿಗೆ ಸಂಭೋಗ ನಡೆಸುವುದನ್ನು ತಡೆದಿರುವ ಘಟನೆ ಗುಜರಾತ್ ವಡೋದರಾದಲ್ಲಿ ನಡೆದಿದೆ.

ವಡೋದರಾ ಜಿಲ್ಲೆಯ ಅಲ್ಕಪುರಿ ಮೂಲದ 43 ವರ್ಷದ ಮಹಿಳೆ ಮತ್ತು ಗಾಂಧಿನಗರದ ವ್ಯಕ್ತಿಯೊಂದಿಗೆ ಕಳೆದ ಫೆಬ್ರವರಿಯಲ್ಲಿ ವಡೋದರಾ ನ್ಯಾಯಾಲಯದಲ್ಲಿ ಅವರ ಮದುವೆಯಾಗಿತ್ತು. ಆದರೆ ಇದೀಗ ಸೊಸೆಗೆ ದೆವ್ವ ಹಿಡಿದಿದೆ ಎಂದೂ, ಆಕೆಯ ಗಂಡನೊಂದಿಗೆ ಸೆಕ್ಸ್ ಮಾಡಿದರೆ ಆಕೆಯ ದೆವ್ವ ಆತನ ದೇಹವನ್ನೂ ಪ್ರವೇಶಿಸುತ್ತದೆ ಎಂದು ಹೇಳುತ್ತಿರುವ ಮಾವ, ಈ ಗಂಡ-ಹೆಂಡತಿ ಲೈಂಗಿಕ ಕ್ರಿಯೆ ನಡೆಸದಂತೆ ತಡೆದಿದ್ದಾನೆ ಎಂದು ನವವಿವಾಹಿತ ಮಹಿಳೆ ಗಾಂಧಿನಗರದಲ್ಲಿ ಪೊಲೀಸ್ ಠಾಣೆ ಮೆಟ್ಟಲೇರಿ ದೂರು ದಾಖಲಿಸಿದ್ದಾಳೆ.

ವೃದ್ಧ ಮಾವ ಸೊಸೆಯೊಂದಿಗೆ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸಿದ್ದು, ಆದರೆ ಇದಕ್ಕೆ ಸೊಸೆ ಮಾವನ ಮಾತಿಗೆ ಸಮ್ಮತಿಸದಿದ್ದಾಗ ಈ ರೀತಿಯ ವಾಮಮಾರ್ಗದ ಮೂಲಕ ತನ್ನ ಗಂಡನಿಂದ ತನ್ನನು ದೂರ ಮಾಡಲು ಯತ್ನಿಸುತ್ತಿದ್ದಾನೆ ಎಂದು ಸೊಸೆ ದೂರಿದ್ದಾಳೆ.

ತನಗೆ ದೆವ್ವ ಹಿಡಿದಿದೆ ಎಂದೂ, ತಾನು ಗಂಡನೊಂದಿಗೆ ಸಂಭೋಗ ನಡೆಸಿದರೆ ಆತನ ದೇಹವನ್ನೂ ದೆವ್ವ ಪ್ರವೇಶಿಸುತ್ತದೆ ಎಂದು ಅವರೆಲ್ಲ ನಂಬಿದ್ದಾರೆ. ಇಂಥ ಅಸಮಂಜಸ ಹೇಳಿಕೆ ವಿರುದ್ಧ ಆಕೆ ಪ್ರತಿಭಟಿಸಿದಾಗ, ಆಕೆಯನ್ನು ಗಂಡನಮನೆಯವರು ಥಳಿಸಿದ್ದಾರೆ. ನಂತರ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾಳೆ.

- Advertisement -

Latest News

error: Content is protected !!