Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಪತ್ರಕರ್ತ ಕೆ.ಎನ್.ಗೌಡರಿಗೆ ಜೀವ ಬೆದರಿಕೆ ಪ್ರಕರಣ: ಹರೀಶ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ...

ಬೆಳ್ತಂಗಡಿ : ಪತ್ರಕರ್ತ ಕೆ.ಎನ್.ಗೌಡರಿಗೆ ಜೀವ ಬೆದರಿಕೆ ಪ್ರಕರಣ: ಹರೀಶ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ನಾಳ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ. ಅವರು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ, ಕಳಿಯ ಗ್ರಾಮದ ‘ದೇವಿ ಕೃಪಾ’ ಪೆಲತ್ತಳಿಕೆ ನಿವಾಸಿ, ಉದಯವಾಣಿ ವರದಿಗಾರ ಕೆ.ಎನ್. ಗೌಡ (ನಾಣ್ಯಪ್ಪ ಗೌಡ) ಅವರು ಡಿ.10 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ಅರ್ಜಿ ನೀಡಿದ್ದರು. ಈ ದೂರಿನ ಬಗ್ಗೆ ಬೆಳ್ತಂಗಡಿ ನ್ಯಾಯಾಲಯದ ಅನುಮತಿ ಪಡೆದ ಬಳಿಕ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹಿಂಬರಹ ನೀಡಿದ್ದರು. ಇದೀಗ ನ್ಯಾಯಾಲಯದ ಅನುಮತಿಯಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ.3ರಂದು ನಾಳ ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ 2027ನೇ ವರ್ಷದಲ್ಲಿ ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಮತ್ತು ಭಕ್ತರ ಸಭೆಯಲ್ಲಿ ಊರಿನ ಭಕ್ತನಾಗಿ ಹಾಗೂ ಪತ್ರಿಕೆ ವರದಿಗಾರನಾಗಿ ಭಾಗವಹಿಸಿರುತ್ತೇನೆ. ಅದರಂತೆಯೇ ಅ ದಿನ ಸಭೆಯಲ್ಲಿ ನಡೆದಿರುವ ವಿಷಯವನ್ನು ಅಧರಿಸಿ ನೈಜ ವರದಿಯನ್ನು ಕಳುಹಿಸಿ ಕೊಟ್ಟಿದ್ದು, ಅದು ಉದಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಪತ್ರಿಕೆಯಲ್ಲಿ ಬಂದ ಬಳಿಕ ಡಿ.9ರಂದು ಶ್ರೀ ಕ್ಷೇತ್ರದ ವಾಟ್ಸಫ್ ಗ್ರೂಪ್‌ನಿಂದ ನನ್ನ ಮೊಬೈಲ್ ಸಂಖ್ಯೆಯನ್ನು ರಿಮೂವ್ ಮಾಡಿದ್ದನ್ನು ವಿಚಾರಿಸಿದಾಗ ಮೊಬೈಲ್ ಪೋನ್ ಮೂಲಕ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿ, ವಾಯ್ಸ್ ರೆಕಾರ್ಡ್ ಕಳುಹಿಸಿ, ನನ್ನ ಪತ್ನಿ, ಮಗಳ ವಿಷಯ ಪ್ರಸ್ತಾಪಿಸಿ ಜೀವ ಬೆದರಿಕೆ ಹಾಕಿರುವುದಾಗಿ ಕೆ.ಎನ್ ಗೌಡ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸರು ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ಬಂದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಾಗಿ ಹಿಂಬರಹ ನೀಡಿದ್ದು ಅದರಂತೆ ಘಟನೆಗೆ ಸಂಬಂಧಿಸಿದಂತೆ ದಾಖಲೆಗಳ ಮೂಲಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ಡಿ.12 ರಂದು ಅನುಮತಿಗಾಗಿ ತಮ್ಮ ವಕೀಲರಾದ ಪ್ರಸಾದ್ ಕೆಎಸ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು. ಜ.20 ರಂದು ನ್ಯಾಯಾಲಯದ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದು, ಅದರಂತೆ ಜ.20 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ
ಬೆರ್ಕೆತ್ದೋಡಿ ನಿವಾಸಿ ಹರೀಶ್ ಕುಮಾರ್ ಬಿ ವಿರುದ್ಧ ಬಿ.ಎನ್.ಎಎನ್-2023 ರಂತೆ (u/s -351(2),352) ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!