- Advertisement -


- Advertisement -
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಯಾಣಿಸುತ್ತಿದ್ದ ಏರ್ ಫೋರ್ಸ್ ಒನ್ ವಿಮಾನವು ಮಂಗಳವಾರ ಸ್ವಿಟ್ಜರ್ಲೆಂಡ್‌ಗೆ ತೆರಳಿದ ಸುಮಾರು ಒಂದು ಗಂಟೆಯ ಬಳಿಕ ವಾಷಿಂಗ್ಟನ್ ನ ಜಂಟಿ ನೆಲೆ ಆಂಡ್ರ್ಯೂಸ್‌ಗೆ ಮರಳಿದೆ.
ವಿಮಾನದಲ್ಲಿದ್ದ ಸಿಬ್ಬಂದಿ ಸಣ್ಣ ವಿದ್ಯುತ್ ಸಮಸ್ಯೆಯನ್ನು ಗುರುತಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಹಿಂತಿರುಗಿಸಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.
ಇನ್ನು ಕೆಲ ಮಾಹಿತಿಗಳ ಪ್ರಕಾರ ಟೇಕ್‌ಆಫ್ ಆದ ಕೆಲಕಾಲದ ಬಳಿಕ ಪ್ರೆಸ್ ಕ್ಯಾಬಿನ್ ನ ದೀಪಗಳು ಆರಿಹೋಗಿದ್ದವು. ಬಳಿಕ ಸುಮಾರು ಅರ್ಧ ಗಂಟೆಯ ಹಾರಾಟದ ನಂತರ ವಿಮಾನವು ವಾಷಿಂಗ್ಟನ್ ಗೆ ಮರಳಲಿದೆ ಎಂಬ ಮಾಹಿತಿ ನೀಡಲಾಯಿತು.
- Advertisement -


