Saturday, June 13, 2026
Homeಉತ್ತರ ಕನ್ನಡಗೋಕರ್ಣದಲ್ಲಿ ಬೋಟಿಂಗ್‌ಗೆ ತೆರಳಿದ್ದ ಬೆಂಗಳೂರಿನ ಮಹಿಳೆ ಸಾವು

ಗೋಕರ್ಣದಲ್ಲಿ ಬೋಟಿಂಗ್‌ಗೆ ತೆರಳಿದ್ದ ಬೆಂಗಳೂರಿನ ಮಹಿಳೆ ಸಾವು

- Advertisement -
- Advertisement -

ಕಾರವಾರ: ಗೋಕರ್ಣ ಪ್ಯಾರಡೈಸ್ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಮಹಿಳೆಯೊಬ್ಬರು ಬೋಟಿಂಗ್‌ಗೆ ತೆರಳಿದ್ದಾಗ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ. ಬೆಂಗಳೂರು ನಿವಾಸಿ ನಾಗರತಿನಮ್ (58) ಮೃತ ದುರ್ದೈವಿ.

 ಬೆಂಗಳೂರಿನಿಂದ ಕುಟುಂಬದ ಜೊತೆ ಆಗಮಿಸಿದ್ದ ಮಹಿಳೆ, ಬೋಟಿಂಗ್‌ಗೆ ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ತಕ್ಷಣ 108 ಆಂಬುಲೆನ್ಸ್‌ಗೆ ಕರೆ ಮಾಡಿದರೂ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬಂದಿಲ್ಲ ಎಂದು ಆರೋಪಿಸಲಾಗಿದೆ.

ಬಳಿಕ ಕುಮಟಾದಿಂದ ಖಾಸಗಿ ಅಂಬುಲೆನ್ಸ್ ಕರೆಸಿ ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಮಹಿಳೆ ಅಸುನೀಗಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

- Advertisement -

Latest News

error: Content is protected !!