Tuesday, June 23, 2026
Homeತಾಜಾ ಸುದ್ದಿಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾ’ರಿಂದ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ "ಸಾಮರಸ್ಯದ ಸಂಕ್ರಾಂತಿ"

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾ’ರಿಂದ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ “ಸಾಮರಸ್ಯದ ಸಂಕ್ರಾಂತಿ”

- Advertisement -
- Advertisement -

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾರವರು ಈ ವರ್ಷದ ಸಂಕ್ರಾಂತಿ ಹಬ್ಬವನ್ನು ಬಹಳ ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.

“ಸಾಮರಸ್ಯದ ಸಂಕ್ರಾಂತಿ” ಎಂಬ ಕಾರ್ಯಕ್ರಮದ ಮೂಲಕ ತಾಲೂಕಿನ ಎಲ್ಲಾ ಪರಿಶಿಷ್ಟ ಜಾತಿ ಬಂಧುಗಳ ಕಾಲೋನಿಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಜ.16 ರಂದು ಆಚರಿಸಿ ಮಾದರಿಯೆನಿಸಿಕೊಂಡಿದ್ದಾರೆ.ಬೆಳ್ತಂಗಡಿ ತಾಲೂಕಿನಾದ್ಯಂತ ಎಲ್ಲಾ ಪರಿಶಿಷ್ಟ ಜಾತಿ ಬಂಧುಗಳ ಕಾಲೋನಿಗೆ ಭೇಟಿ ನೀಡಿ ಅವರೊಂದಿಗೆ ವಿಶೇಷವಾಗಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.

ವೇಣೂರಿನಲ್ಲಿ ಜ.14 ರಂದು ಪ್ರಾರಭಗೊಂಡ ಈ ಸಾಮರಸ್ಯದ ಸಂಕ್ರಾಂತಿಯು ಎರಡು ದಿನಗಳಲ್ಲಿ ಸುಮಾರು 2000 ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಬಂಧುಗಳೊಂದಿಗೆ ಸಂಕ್ರಾಂತಿಯನ್ನು ಆಚರಿಸಿದರು‌‌. ಸಮಾಜದಲ್ಲಿರುವ ಜಾತಿ ತಾರತಮ್ಯ, ಅಸ್ಪಶ್ರ್ಯತೆ, ಮೇಲು-ಕೀಳು ಎಂಬ ಭಾವನೆಯನ್ನು ತೊಡೆದು ಹಾಕುವ ಉದ್ಧೇಶದಿಂದ ಸಾಮರಸ್ಯದ ಸಂಕ್ರಾಂತಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲದ ಎಲ್ಲಾ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಸಾರ್ವಜನಿಕರು, ಪ.ಜಾತಿ ಬಂಧುಗಳು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು

- Advertisement -

Latest News

error: Content is protected !!