Monday, September 28, 2026
Homeಉತ್ತರ ಕನ್ನಡಕಾರವಾರ:ಮೊಬೈಲ್ ಅಂಗಡಿಯಲ್ಲಿ ಕಳವು ಪ್ರಕರಣ; ನಾಲ್ವರು ಹತ್ತನೇ ತರಗತಿ ವಿದ್ಯಾರ್ಥಿಗಳ ಬಂಧನ

ಕಾರವಾರ:ಮೊಬೈಲ್ ಅಂಗಡಿಯಲ್ಲಿ ಕಳವು ಪ್ರಕರಣ; ನಾಲ್ವರು ಹತ್ತನೇ ತರಗತಿ ವಿದ್ಯಾರ್ಥಿಗಳ ಬಂಧನ

- Advertisement -
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದಲ್ಲಿ ಮೊಬೈಲ್ ಅಂಗಡಿಯ ಬೀಗ ಮುರಿದು ಕಳವು ಮಾಡಿದ್ದ ನಾಲ್ವರು ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಮುಂಡಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ವಿವಿಧ ಕಂಪನಿಯ ಮೊಬೈಲ್‌ಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ವಿದ್ಯಾರ್ಥಿಗಳು ಸ್ಥಳೀಯ ವಸತಿ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ರಾತ್ರಿ ಸುಮಾರು 1 ಗಂಟೆಗೆ ವಸತಿ ನಿಲಯದಿಂದ ಹೊರಬಂದ ನಾಲ್ವರು, ಎರಡು ಕಿಲೋಮೀಟರ್ ದೂರದಲ್ಲಿರುವ ಮುಂಡಗೋಡು ಪಟ್ಟಣಕ್ಕೆ ಬಂದಿದ್ದಾರೆ. ಮೊದಲು ಯಲ್ಲಾಪುರ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯ ಮೇಲ್ಛಾವಣಿ ಮುರಿದು ಒಳನುಗ್ಗಿದ್ದು, ಅಲ್ಲಿ ಮೊಬೈಲ್‌ಗಳು ಸಿಗದ ಕಾರಣ ಶಿರಸಿ ರಸ್ತೆಯಲ್ಲಿರುವ ಮತ್ತೊಂದು ಮೊಬೈಲ್ ಅಂಗಡಿಯ ಕಬ್ಬಿಣದ ಬಾಗಿಲು ಹಾಗೂ ಬೀಗ ಮುರಿದು ಕಳವು ಎಸಗಿದ್ದಾರೆ.

ರಿಪೇರಿಗೆ ಬಂದಿದ್ದ ಮೊಬೈಲ್‌ಗಳು, ಪವರ್ ಬ್ಯಾಂಕ್, ನೆಕ್‌ಬ್ಯಾಂಡ್, ಇಯರ್‌ಬಡ್ಸ್, ಸ್ಪೀಕರ್ ಹಾಗೂ ಚಾರ್ಜರ್‌ಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಕೃತ್ಯದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರ್ಯಾಚರಣೆ ನಡೆಸಿದ పోలీసులు ಆರೋಪಿಗಳನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!