Tuesday, September 29, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಇಳಂತಿಲದಲ್ಲಿ ವಿಜೃಂಭಣೆಯ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವ: 'ದೋಸೆ ಹಬ್ಬ'ದ ಸಂಭ್ರಮ

ಬೆಳ್ತಂಗಡಿ: ಇಳಂತಿಲದಲ್ಲಿ ವಿಜೃಂಭಣೆಯ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವ: ‘ದೋಸೆ ಹಬ್ಬ’ದ ಸಂಭ್ರಮ

- Advertisement -
- Advertisement -

​ಬೆಳ್ತಂಗಡಿ: ತಾಲೂಕಿನ ಇಳಂತಿಲ ಗ್ರಾಮದ ವಾಣಿಶ್ರೀ ಭಜನಾ ಮಂದಿರದಲ್ಲಿ ದಿನಾಂಕ 27/09/2026ರಂದು ‘ಟೀಮ್ ಬಿರುವ’ ಹಾಗೂ ಸಮಸ್ತ ಬಿಲ್ಲವರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವವು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿತು.

​ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಸಮುದಾಯದ ಸಮಸ್ತ ಬಿಲ್ಲವ ಬಾಂಧವರು ಭಾರತ ಮಾತೆ ಹಾಗೂ ನಾರಾಯಣ ಗುರುಗಳಿಗೆ ಭಕ್ತಿಪೂರ್ವಕ ಅರ್ಚನೆ ಸಲ್ಲಿಸಿ, ಅವರ ತತ್ವಾದರ್ಶಗಳನ್ನು ಸ್ಮರಿಸಿದರು.​ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುವರ್ಣ ಪ್ರತಿಷ್ಠಾನ ಹಾಗೂ ಮಂಜ ವೈದ್ಯ ಸಂಸ್ಮರಣ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖರಾದ ಸಂಪತ್ ಬಿ. ಸುವರ್ಣ ಮಾತನಾಡಿ, “ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ-ಸಂದೇಶಗಳು ಸಮಗ್ರ ಸಮಾಜ, ಹಿಂದುಳಿದ ವರ್ಗಗಳು ಹಾಗೂ ದೀನ-ದಲಿತರ ಏಳಿಗೆಗೆ ದಾರಿದೀಪವಾಗಿವೆ. ಗುರುಗಳ ಆದರ್ಶಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದರ ಜತೆಗೆ, ಸಮಸ್ತ ಸಮಾಜವನ್ನು ಪ್ರೀತಿ-ವಿಶ್ವಾಸದಿಂದ ಒಗ್ಗೂಡಿಸಿಕೊಂಡು ಮುನ್ನಡೆಯುವ ದೂರದೃಷ್ಟಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

​ಇದೇ ಸಂದರ್ಭದಲ್ಲಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ ಭಾಜನರಾದ ಶ್ರೀ ಕೃಷ್ಣಪ್ಪ ಪೂಜಾರಿ ಅವರನ್ನು ‘ಟೀಮ್ ಬಿರುವ’ ಹಾಗೂ ಸಮುದಾಯದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.​ಕಾರ್ಯಕ್ರಮದ ಅಂಗವಾಗಿ ಸಮಸ್ತ ಬಿಲ್ಲವ ಬಾಂಧವರಿಗೆ ಆಯೋಜಿಸಲಾಗಿದ್ದ ‘ದೋಸೆ ಹಬ್ಬ’ವು ಎಲ್ಲರೂ ಒಂದೇ ಕುಟುಂಬದಂತೆ ಬೆರೆತು ಸಾಮರಸ್ಯ ಹಂಚಿಕೊಳ್ಳುವ ಆತ್ಮೀಯ ವಾತಾವರಣವನ್ನು ನಿರ್ಮಿಸಿತು.

​ಕಾರ್ಯಕ್ರಮದಲ್ಲಿ ಟೀಮ್ ಬಿರುವದ ಪ್ರಮುಖರಾದ ಅಶೋಕ್ ಇಳಂತಿಲ, ಉಮೇಶ್ ಅಣ್ಣಾಜೆ,ಮನೋಜ್ ಅನ್ನಾಜೆ, ಪರಮೇಶ್ವರ ಅಣ್ಣಾಜೆ ರಾಜೇಶ್ ಪಾಡಿಂಕಿ, ಅರುಣ್ ಪಾಡಿಂಕಿ, ವಸಂತಾಲ್ಯಾನ್ ಪಾಡಿಂಕಿ, , ರವಿಚಂದ್ರ ಕೋಟ್ರಾಸ್, ಗಣೇಶ್ ಕೋಟ್ರಾಸ್, ತುಷಾಂತ್ ವಾಣಿನಗರ, ಶಶಿ ಗಂಡಿಬಾಗಿಲು, ಶರತ್ ಅಲಂಪಾಡಿ, ಸೃಜನ್ ಅಗರ್ತ, ಗಣೇಶ್ ನೀನಿ, ಜಗದೀಶ್ ನೂಜ, ಗೀತಾ ಅಂಚನ್, ಸಂದೀಪ್,ಮೋಹನ್ ನೂಜ, ಕಿಟ್ಟಣ್ಣ ನೂಜ, ಪ್ರಭಾಕರ್,ವಸಂತ್ ಅಣ್ಣಾಜೆ, ನಿತಿನ್  ಸೇರಿದಂತೆ ಊರ-ಪರವೂರ ಬಾಂಧವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!