- Advertisement -


- Advertisement -
ಕಾರವಾರ: ಇಲ್ಲಿನ ನಂದನಗದ್ದೆಯ ‘ಪ್ರೀಮಿಯರ್ ಸೈನ್ಸ್ ಆಂಡ್ ಕಾಮರ್ಸ್ ಪಿಯು ಕಾಲೇಜಿ’ನಲ್ಲಿ ದ್ವಿತೀಯ ಪಿಯುಸಿ ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಜೂನ್ 24 ರಂದು ಕಾಣೆಯಾಗಿದ್ದಾರೆ.
ನಾಪತ್ತೆಯಾದವರನ್ನು ಪೂನಮ್ ಜಿತೇಂದ್ರ ವೈಷ್ಣವ್ (16) ಮತ್ತು ಸಾಗರ ಬಿಷನುಪದ ಪೋರಿಯಾ (17) ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿಗಳ ಚಹರೆ ವಿವರ:
- ಪೂನಮ್: 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ. ಹಿಂದಿ, ರಾಜಸ್ತಾನಿ, ಕೊಂಕಣಿ ಹಾಗೂ ಇಂಗ್ಲಿಷ್ ಭಾಷೆ ಮಾತನಾಡಬಲ್ಲರು. ಬಿಳಿ ಬಣ್ಣದ ಚೂಡಿದಾರ ಟಾಪ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.
- ಸಾಗರ: 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ. ಹಿಂದಿ, ಬಂಗಾಳಿ, ಕೊಂಕಣಿ ಹಾಗೂ ಇಂಗ್ಲಿಷ್ ಭಾಷೆ ಮಾತನಾಡಬಲ್ಲರು. ಬೂದು (Grey) ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.
ಈ ವಿದ್ಯಾರ್ಥಿಗಳ ಬಗ್ಗೆ ಯಾವುದೇ ಸುಳಿವು ದೊರೆತಲ್ಲಿ ಸಾರ್ವಜನಿಕರು ತಕ್ಷಣ ಕಾರವಾರ ಮಹಿಳಾ ಪೊಲೀಸ್ ಠಾಣೆ (ಮೊ: 8277987514, 8277987555) ಅಥವಾ ಕಂಟ್ರೋಲ್ ರೂಮ್ (9480805200) ಸಂಖ್ಯೆಯನ್ನು ಸಂಪರ್ಕಿಸುವಂತೆ ಮಹಿಳಾ ಠಾಣೆ ನಿರೀಕ್ಷಕರು ವಿನಂತಿಸಿದ್ದಾರೆ.
- Advertisement -


