Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಮುಂಡಾಜೆ ಜಿ.ಎನ್.ಭಿಡೆ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

ಬೆಳ್ತಂಗಡಿ : ಮುಂಡಾಜೆ ಜಿ.ಎನ್.ಭಿಡೆ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

- Advertisement -
- Advertisement -

ಬೆಳ್ತಂಗಡಿ : ಮುಂಡಾಜೆಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಆಶ್ರಯದಲ್ಲಿ ಜ.11 ರಂದು ಮುಂಡಾಜೆ ವಿವೇಕಾನಂದ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ 35 ವರ್ಷ ಮೇಲ್ಪಟ್ಟವರ ಲೆಜೆಂಡ್ಸ್  ಕ್ರಿಕೆಟ್ ಪಂದ್ಯಾಟ ನಡೆಯಿತು. ಮುಂಡಾಜೆ ಪ್ರಭು ಕ್ಲಿನಿಕ್ ನ ಡಾ. ರವೀಂದ್ರನಾಥ ಪ್ರಭು ಕ್ರೀಡಾಂಗಣದ ಉದ್ಘಾಟನೆ ‌ನೆರವೇರಿಸಿ ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ. ಭಿಡೆ ನೆರವೇರಿಸಿದರು.ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮುಂಡಾಜೆ ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ ನಾರಾಯಣ ರಾವ್, ಮುಂಡಾಜೆ ಗ್ರಾ.ಪಂ. ಸದಸ್ಯ ರವಿಚಂದ್ರ, ಮುಂಡಾಜೆ ಗ್ರಾ.ಪಂ. ಮಾಜಿ ‌ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೊಸಗದ್ದೆ, ಮಾಜಿ ಸದಸ್ಯ ನಾರಾಯಣ ಗೌಡ ದೇವಸ್ಯ, ನಿವೃತ್ತ ಶಿಕ್ಷಕ ಶಂಕರ್ ತಾಮಣ್ ಕರ್, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ ಶೆಟ್ಟಿ, ಸೂರಜ್ ಅಡೂರು, ಬಾಬು ಪೂಜಾರಿ ಕುಳೂರು, ವೈ.ಸಿ.ಎಸ್.ಸಿ. ಉಪಾಧ್ಯಕ್ಷ ವಿಜಯ ಕುಮಾರ್, ಚೆನ್ನಕೇಶವ ‌ನಾಯ್ಕ ಅರಸಮಜಲು, ಉದ್ಯಮಿ ನಾಗೇಶ್ ಕುಮಾರ್ ಗೌಡ, ರಬ್ಬರ್ ಸೊಸೈಟಿ ಸಿಇಒ ರಾಜು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಶಶಿಧರ ಠೋಸರ್ ಸ್ವಾಗತಿಸಿ, ಸಾಂತಪ್ಪ ವಂದಿಸಿದರು. ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಹಾಗೂ ಕೆ.ಎಸ್.ಆರ್.ಟಿ.ಸಿ. ಉದ್ಯೋಗಿ ನಾರಾಯಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಪದಾಧಿಕಾರಿಗಳು ಸಹಕರಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಪುಷ್ಪರಾಜ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ  ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಮುಂಡಾಜೆ ಭಿಡೆ ಮೆಡಿಕಲ್ ‌ಮಾಲಕ ಸುಜಿತ್ ಭಿಡೆ, ಕ್ರೀಡಾ ಸಂಘದ ಮಾಜಿ ಅಧ್ಯಕ್ಷ ನಾಗರಾಜ ನಾಯ್ಕ್, ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಚಾಲಕ ನಾರಾಯಣ ಫಡ್ಕೆ,ಪೋಲಿಸ್ ‌ಸಿಬ್ಬಂದಿ ಆಸೀಫ್, ಉದ್ಯಮಿಗಳಾದ ಸಿದ್ದೀಕ್ ರೋಝಾ, ಆಸೀಫ್ ಜಿ.ಕೆ. ಮಂಗಳೂರು, ಮುಂಡಾಜೆ ಶ್ರೀದೇವಿ ಶಾಮಿಯಾನ ಮಾಲಕ ದೇವಿಪ್ರಸಾದ್, ಅನ್ವರ್ ದುಬೈ, ಸಿದ್ದೀಕ್ ಸಾಗರ್  ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ತಾಲೂಕಿನ ಹಿರಿಯ ಕ್ರೀಡಾಪಟುಗಳಾದ ದೇವಿಪ್ರಸಾದ್ ಬೆಳ್ತಂಗಡಿ, ಚಂದ್ರಹಾಸ ಕೇದೆ, ಇಬ್ರಾಹಿಂ ಕಕ್ಕಿಂಜೆ, ಶಿವ ಧರ್ಮಸ್ಥಳ, ಹೇಮಂತ್ ಶೆಟ್ಟಿ ಮುಂಡಾಜೆ ‌ಇವರನ್ನು ಸನ್ಮಾನಿಸಲಾಯಿತು.ಸಂಘದ ಸಂಚಾಲಕ ನಾಮದೇವ ರಾವ್ ಸ್ವಾಗತಿಸಿ, ನಾರಾಯಣ ‌ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಫಲಿತಾಂಶ : ಮಾರ್ನಿಂಗ್ ‌ಕ್ರಿಕೆಟರ್ಸ್ ಉಜಿರೆ (ಪ್ರ), ಗೆಲ್ಯಾಕ್ಸಿ‌ ಕಕ್ಕಿಂಜೆ (ದ್ವಿ), ಯಂಗ್ ಚಾಲೆಂಜರ್ಸ್ ಎ ಮುಂಡಾಜೆ (ತೃ), ಯಂಗ್ ಚಾಲೆಂಜರ್ಸ್ ‌ಬಿ (ಚ) ಸ್ಥಾನ ಪಡೆದುಕೊಂಡಿತು. ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

- Advertisement -

Latest News

error: Content is protected !!