- Advertisement -
![]()
- Advertisement -
ಕಾಸರಗೋಡು: ಸ್ಕೂಟರ್ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿಯಾಗಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕುಂಬಳೆ ಪೂಕಟ್ಟೆ ಎಂಬಲ್ಲಿ ನಡೆದಿದೆ. ಬಂಬ್ರಾಣ ಚೂರಿತ್ತಡ್ಕ ನಿವಾಸಿ ರಝಾಕ್ -ರಂಶೀನಾ ದಂಪತಿಯ ಪುತ್ರಿ ರಿಸ್ವಾನ (15) ಮೃತ ದುರ್ದಿ.
ರಿಸ್ವಾನಾ ಮತ್ತು ಗೆಳತಿ ಸ್ಕೂಟರಿನಲ್ಲಿ ಟ್ಯೂಷನ್‌ಗೆ ಹೋಗುವಾಗ ದುರಂತ ಸಂಭವಿಸಿದೆ. ಅಪಘಾತದ ಬೆನ್ನಲ್ಲೇ ಇಬ್ಬರನ್ನೂ ಕುಂಬಳೆ ಸೇವಾ ಸಹಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರ ಗಾಯಗೊಂಡ ರಿಸ್ವಾನಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
- Advertisement -


