Saturday, June 13, 2026
Homeಕರಾವಳಿಮಂಗಳೂರುಸುಳ್ಯ: ಚಪ್ಪಲಿಯೊಳಗೆ ಅವಿತುಕೊಂಡಿದ್ದ ಹಾವು ಕಚ್ಚಿ, ಮಹಿಳೆ ಆಸ್ಪತ್ರೆಗೆ ದಾಖಲು

ಸುಳ್ಯ: ಚಪ್ಪಲಿಯೊಳಗೆ ಅವಿತುಕೊಂಡಿದ್ದ ಹಾವು ಕಚ್ಚಿ, ಮಹಿಳೆ ಆಸ್ಪತ್ರೆಗೆ ದಾಖಲು

- Advertisement -
- Advertisement -

ಸುಳ್ಯ: ಚಪ್ಪಲಿಯೊಳಗೆ ಅವಿತುಕೊಂಡಿದ್ದ ಹಾವು ಕಚ್ಚಿ, ಮಹಿಳೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕೋಲ್ಚಾರಿನಲ್ಲಿ ನಡೆದಿದೆ. ವಿನುತಾ ಹಾವು ಕಡಿತಕ್ಕೆ ಒಳಗಾದ ಮಹಿಳೆ.

 ವಿನುತಾ ಬೆಳಗ್ಗೆ ಮನೆಯ ಹೊರಗೆ ಇದ್ದ ಚಪ್ಪಲಿಯನ್ನು ನೋಡದೇ ಹಾಗೇ ಧರಿಸಿದ್ದಾರೆ. ಈ ವೇಳೆ ಚಪ್ಪಲಿಯೊಳಗಿದ್ದ ಹಾವು ವಿನುತಾ ಅವರ ಕಾಲಿಗೆ ಕಚ್ಚಿದೆ. ಕೂಡಲೇ  ಅವರನ್ನು  ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು ಪ್ರಾಥಮಿಕ ಚಿಕಿತ್ಸೆ ಬಳಿಕ ತುರ್ತು ಚಿಕಿತ್ಸೆ ವಿಭಾಗದಲ್ಲಿ  ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

- Advertisement -

Latest News

error: Content is protected !!