- Advertisement -
![]()
- Advertisement -
ಬೆಂಗಳೂರು: ಪವರ್ ಸ್ಟಾರ್ ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ ಜೀವನಾಧಾರಿತ ಎಐ ತಂತ್ರಜ್ಞಾನ ಆಧಾರಿತ ಮೊಬೈಲ್ ಆ್ಯಪ್ ಕನ್ನಡದ ಅಪ್ಪು ಲೋಕಾರ್ಪಣೆಗೊಂಡಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಕನ್ನಡದ ಆಪ್ಪು ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದ್ದು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಆ್ಯಪ್ ನಲ್ಲಿ ಬಾಲ್ಯಕಾಲದ ಪುನೀತ್ ಸೇರಿದಂತೆ ಇತ್ತೀಚಿನ ದಿನದವರೆಗಿನ ತನಕದ ಪುನೀತ್ ರಾಜ್ ಕುಮಾರ್ ಅವರ ಕೆಲಸಗಳನ್ನು ಸೃಷ್ಟಿಸಲಾಗಿದೆ.
ಅಪ್ಪು ಪಿಆರ್ ಕೆ ಫ್ಯಾನ್ ಡಮ್ ಆ್ಯಪ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೀವನ, ಸಿನಿಮಾ, ಖಾಸಗಿ ಬದುಕು ಮತ್ತು ಸಮಾಜ ಸೇವೆ ಸೇರಿದಂತೆ ಹಲವು ವಿಚಾರಗಳಿಗೆ ಚಲನಚಿತ್ರ ನಟ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ. ಕನ್ನಡದ ಅಪ್ಪು ವಿಶ್ವದ ಮೊತ್ತ ಮೊದಲ ಫ್ಯಾನ್ ಡಮ್ ಆ್ಯಪ್ ಆಗಿದೆ.
- Advertisement -


