Tuesday, June 23, 2026
Homeತಾಜಾ ಸುದ್ದಿಸೋಮವಾರ ರಾತ್ರಿ 8 ರಿಂದ ಮಂಗಳವಾರ ಬೆಳಗ್ಗೆ 11 ವರೆಗೆ ಎಸ್ಕಾಂಗಳ ಆನ್‌ ಲೈನ್‌ ಸೇವೆ...

ಸೋಮವಾರ ರಾತ್ರಿ 8 ರಿಂದ ಮಂಗಳವಾರ ಬೆಳಗ್ಗೆ 11 ವರೆಗೆ ಎಸ್ಕಾಂಗಳ ಆನ್‌ ಲೈನ್‌ ಸೇವೆ ಅಲಭ್ಯ

- Advertisement -
- Advertisement -

ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆಯಲ್ಲಿ ಐದು ಎಸ್ಕಾಂಗಳ ಆನ್‌ ಲೈನ್‌ ಸೇವೆಗಳು ಸೋಮವಾರ ಮತ್ತು ಮಂಗಳವಾರ ಕೆಲವು ಗಂಟೆಗಳ ಕಾಲ ಸ್ಥಗಿತಗೊಳ್ಳಲಿದೆ.

ಆನ್ ಲೈನ್ ಸೇವೆಗಳಾದ ವಿದ್ಯುತ್‌ ಬಿಲ್‌ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಆನ್‌ ಲೈನ್‌ ಆಧಾರಿತ ಸೇವೆಗಳು ಅಕ್ಟೋಬರ್ 27ರ ರಾತ್ರಿ 8 ಗಂಟೆಯಿಂದ ಅಕ್ಟೋಬರ್ 28ರ ಬೆಳಗ್ಗೆ 11 ಗಂಟೆಯವರೆಗೆ ನಗರ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ.

ಎಲ್ಲಾ ಐದು ವಿದ್ಯುತ್‌ ಸರಬರಾಜು ಕಂಪನಿಗಳ ನಗರ ಉಪ ವಿಭಾಗದ ಗ್ರಾಹಕರಿಗೆ https://www.bescom.co.in, www.hescom.co.in, www.gescomglb.org, www.mescom.org.in ಮತ್ತು cescmysore.in ಪೋರ್ಟಲ್ ಗಳ ಮೂಲಕ ಮಾಡುವ ಆನ್‌ ಲೈನ್‌ ಸೇವೆಗಳಾದ ಬಿಲ್ ಪಾವತಿ, ಹೊಸ ಸಂಪರ್ಕ ಲಭ್ಯವಿರುವುದಿಲ್ಲ.

ಅದೇ ರೀತಿ ವಿದ್ಯುತ್ ಬಿಲ್ ಪಾವತಿಗಾಗಿ ಬಳಸುವ ಬೆಸ್ಕಾಂ ಮಿತ್ರ ಆಪ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿದಂತೆ ಥರ್ಡ್ ಪಾರ್ಟಿ ಪಾವತಿ ವಿಧಾನಗಳಲ್ಲಿ ಕೂಡಾ ಆನ್ ಲೈನ್ ಸೇವೆ ಅಲಭ್ಯವಾಗಲಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿ ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ ಮತ್ತು ಚಿಕ್ಕಮಗಳೂರು
ಉಪ ವಿಭಾಗಗಳ ನಗರ ಪ್ರದೇಶಗಳಲ್ಲಿ ಆನ್ ಲೈನ್ ಸೇವೆ ಸ್ಥಗಿತಗೊಳ್ಳಲಿದೆ.

ಚೆಸ್ಕಾಂ ವ್ಯಾಪ್ತಿಯಲ್ಲಿ ಮಳವಳ್ಳಿ, ನಂಜನಗೂಡು, ಮೈಸೂರು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ.ಆರ್. ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೆಗಾಲ, ಹಾಸನ ಮತ್ತು ಚನ್ನರಾಯಪಟ್ಟಣ ಪ್ರದೇಶಗಳಲ್ಲಿ ಆನ್‌ ಲೈನ್‌ ಸೇವೆಗಳು ಲಭ್ಯವಿರುವುದಿಲ್ಲ.

- Advertisement -

Latest News

error: Content is protected !!