Saturday, September 12, 2026
Homeತಾಜಾ ಸುದ್ದಿಕಾಲ್ತುಳಿತ ದುರಂತಕ್ಕೆ ತಮಿಳುನಾಡು ಸರ್ಕಾರವೇ ಕಾರಣ: ನಟ ವಿಜಯ್‌ ಗಂಭೀರ ಆರೋಪ

ಕಾಲ್ತುಳಿತ ದುರಂತಕ್ಕೆ ತಮಿಳುನಾಡು ಸರ್ಕಾರವೇ ಕಾರಣ: ನಟ ವಿಜಯ್‌ ಗಂಭೀರ ಆರೋಪ

- Advertisement -
- Advertisement -

ಚೆನ್ನೈ: ನಟ ವಿಜಯ್‌ ದಳಪತಿ ಚುನಾವಣಾ ರ್ಯಾಲಿಯು ತಮಿಳುನಾಡಿನ ಕರೂರಿನಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ 40 ಜನರು ಸಾವನ್ನಪ್ಪಿದ್ದಾರೆ. ನೂರಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ನಡುವೆ ನಟ ದಳಪತಿ ವಿಜಯ್‌, ಕಾಲ್ತುಳಿತ ದುರಂತಕ್ಕೆ ಸರ್ಕಾರವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್‌ ಸರ್ಕಾರದ ವಿರುದ್ಧ ನಟ ವಿಜಯ್‌ ವಾಗ್ದಾಳಿ ನಡೆಸಿದ್ದು, ತಮಿಳುನಾಡು ಸರ್ಕಾರದ ಪಿತೂರಿಯಿಂದಲೇ ಕಾಲ್ತುಳಿತ ಸಂಭವಿಸಿದೆ. ವಿಶಾಲ ಮೈದಾನದಲ್ಲಿ ರ್ಯಾಲಿ ನಡೆಸಲು ಅವಕಾಶ ನೀಡಲಿಲ್ಲ. ಸ್ಟಾಲಿನ್‌ ಸರ್ಕಾರ ಸುರಕ್ಷಿತ ಪ್ರದೇಶವನ್ನು ನೀಡಿಲ್ಲ. ಇಕ್ಕಟ್ಟಿನ ಪ್ರದೇಶ ನೀಡಿದ್ದರಿಂದಲೇ ಕಾಲ್ತುಳಿತ ಸಂಭವಿಸಿ ದುರಂತ ನಡೆದಿದೆ ಎಂದು ಹೇಳಿದ್ದಾರೆ.

ಕಾಲ್ತುಳಿತದ ಹಿಂದೆ ಪಿತೂರಿ, ಷಡ್ಯಂತ್ರವಿದೆ. ಈ ದುರಂತಕ್ಕೆ ಸರ್ಕಾರವೇ ನೇರ ಹೊಣೆ ಎಂದು ವಿಜಯ್‌ ಗಂಭೀರ ಆರೋಪ ಮಾಡಿದ್ದಾರೆ.

- Advertisement -

Latest News

error: Content is protected !!