Tuesday, June 9, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ಹಾಜರಾದ ವಸಂತಿ ಸಹೋದರ ವಿಜಯ್; ಎಸ್.ಐ.ಟಿ ಅಧಿಕಾರಿಗಳಿಗೆ ವಸಂತಿಯವರ ದಾಖಲೆಗಳು...

ಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ಹಾಜರಾದ ವಸಂತಿ ಸಹೋದರ ವಿಜಯ್; ಎಸ್.ಐ.ಟಿ ಅಧಿಕಾರಿಗಳಿಗೆ ವಸಂತಿಯವರ ದಾಖಲೆಗಳು ಹಸ್ತಾಂತರ

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯ ಭಟ್ ಎಂಬಾಕೆ ಬೆಳ್ತಂಗಡಿಗೆ ಬಂದು ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುಜಾತಾ ಭಟ್ ನೀಡಿದ ಸುಳ್ಳು ದೂರಿನ ವಿಚಾರವಾಗಿ ಸೆ.18 ರಂದು ವಸಂತಿ ಎಂ.ಪಿ. ಅವರ ಸಹೋದರ ಕೊಡಗು ಮೂಲದ ವಿಜಯ್ ಬೆಳ್ತಂಗಡಿ ಎಸ್.ಐ.ಟಿ. ಕಚೇರಿಗೆ ಹಾಜರಾಗಿದ್ದಾರೆ.

ವಿಚಾರಣೆಗೆಂದು ಎಸ್ಐಟಿ ಕಚೇರಿಯಿಂದ ವಿಜಯ್ ಅವರಿಗೆ ನೋಟಿಸ್ ನೀಡಲಾಗಿತ್ತು. ಸುಜಾತಾ ಭಟ್ ಅವರು ತನ್ನ ಮಗಳು ಅನನ್ಯ ಭಟ್ ಧರ್ಮಸ್ಥಳಕ್ಕೆ ಸ್ನೇಹಿತೆಯರ ಜತೆ ಬಂದು ಕಾಣೆಯಾಗಿದ್ದಳು, ಅವಳ‌ ಬಗ್ಗೆ ಧರ್ಮಸ್ಥಳದಲ್ಲಿ ವಿಚಾರಿಸಿದಾಗ ದೂರು ಪಡೆದಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಅದಾದ ಬಳಿಕ ಅನನ್ಯಾ ಭಟ್ ಎಂದು ಹೇಳಿ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಸುಶ್ರೂಶಕಿಯಾಗಿದ್ದ ವಸಂತಿ ಎಂ.ಪಿ. ಅವರ ಫೋಟೋವನ್ನು ಮಾಧ್ಯಮಕ್ಕೆ ತೋರಿಸಿದ್ದರು.

ವಿಚಾರಣೆ ಬಳಿಕ ಈಕೆ ಸುಜಾತಾ ಭಟ್ ನೀಡಿದ ಫೋಟೋ ಸುಳ್ಳು ಮಾಹಿತಿಯಾಗಿದ್ದು, ವಸಂತಿ ಎಂ.ಪಿ. ಅವರು ಮೃತಪಟ್ಟು 18 ವರ್ಷವಾಗಿದೆ ಎಂದು ತಿಳಿದು ಬಂದಿದೆ. ವಸಂತಿ ಅವರ ಮಾವ ರಂಗಪ್ರಸಾದ್ ಅವರ ಮನೆಯಲ್ಲಿ ಕೇರ್ ಟೇಕರ್ ಆಗಿ ಸುಜಾತಾ ಭಟ್ ಆಶ್ರಯಪಡೆದಿದ್ದರು. ಈ ವೇಳೆ ಅಲ್ಲಿದ್ದ ವಸಂತಿ ಫೋಟೋವನ್ನು ಮಾಧ್ಯಮಕ್ಕೆ ನೀಡಿದ್ದರು.

ಈ ವಿಚಾರವಾಗಿ ಎಸ್.ಐ.ಟಿ. ವಿಚಾರಣೆಗೆ ಬೆಳ್ತಂಗಡಿಗೆ ವಿಜಯ್ ಅವರನ್ನು ಕರೆಸಿ ಹೇಳಿಕೆ ಪಡೆದಿದೆ. ವಿಜಯ್ ಅವರು ವಾಸಂತಿ ಮೃತಪಟ್ಟ ಮರಣ ಪ್ರಮಾಣ ಪತ್ರವನ್ನು ಎಸ್ಐಟಿಗೆ ನೀಡಿದ್ದಾರೆ. ಅದಕ್ಕೆ ಸಂಬಂಧಿಸಿದ ಇತರ ದಾಖಲೆ ಒದಗಿಸಿರುವುದಾಗಿ ವಿಜಯ್ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ತಿಳಿಸಿದ್ದಾರೆ.

- Advertisement -

Latest News

error: Content is protected !!