Saturday, June 6, 2026
Homeಕರಾವಳಿಮಂಗಳೂರುಮಂಗಳೂರು; ಇಂಜಿನ್ ಕೈಕೊಟ್ಟ ಬಂಡೆಗೆ ಬಡಿದು ಮೀನುಗಾರಿಕಾ ಬೋಟ್ ಪಲ್ಟಿ; ಈಜಿ ದಡ ಸೇರಿದ 13 ...

ಮಂಗಳೂರು; ಇಂಜಿನ್ ಕೈಕೊಟ್ಟ ಬಂಡೆಗೆ ಬಡಿದು ಮೀನುಗಾರಿಕಾ ಬೋಟ್ ಪಲ್ಟಿ; ಈಜಿ ದಡ ಸೇರಿದ 13  ಮೀನುಗಾರರು

- Advertisement -
- Advertisement -

ಮಂಗಳೂರು; ಇಂಜಿನ್ ಕೈಕೊಟ್ಟ ಬಂಡೆಗೆ ಬಡಿದು ಮೀನುಗಾರಿಕಾ ಬೋಟ್ ಪಲ್ಟಿಯಾದ ಪರಿಣಾಮ 13  ಮೀನುಗಾರರು ಈಜಿ ದಡ ಸೇರಿದ ಘಟನೆ ಮಂಗಳೂರು ಹೊರಬಲಯದ ಉಳ್ಳಾಲದಲ್ಲಿ ನಡೆದಿದೆ.

ಘಟನೆಯಲ್ಲಿ ಮೀನುಗಾರಿಕಾ ಬೋಟ್ ಗೆ ಸಂಪೂರ್ಣ ಹಾನಿಯಾಗಿದೆ. ಹಠಾತ್ತನೆ ಇಂಜಿನ್ ಆಫ್ ಆದ ಪರಿಣಾಮ ನಿಯಂತ್ರಣ ಕಳೆದು ಕೊಂಡ ಮೀನುಗಾರಿಕಾ ಬೋಟ್ ಸಮುದ್ರ ತಟದ ಕಲ್ಲು ಬಂಡೆಗಳಿಗೆ ಬಡಿದು ಪಲ್ಟಿಯಾಗಿದೆ. ಉಳ್ಳಾಲ ಸೀಗ್ರೌಂಡಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ.

ಬೋಟ್ ಪಲ್ಟಿಯಾಗುತ್ತಿದ್ದಂತೆ ಬೋಟ್ ಚಾಲಕ ಸೇರಿ ಹದಿಮೂರು ಮಂದಿ ಮೀನುಗಾರರು ಈಜಿ ದಡ ಸೇರಿದ್ದಾರೆ. ಅಶ್ಫಕ್ ಎಂಬವರ ಮಾಲೀಕತ್ವದ ಬುರಖ್ ಹೆಸರಿನ ಮೀನುಗಾರಿಕಾ ಬೋಟ್ ಇದಾಗಿದೆ. ಘಟನೆಯಲ್ಲಿ‌ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ.

- Advertisement -

Latest News

error: Content is protected !!