Wednesday, June 24, 2026
Homeಕರಾವಳಿಮಂಗಳೂರುಮಂಗಳೂರು: ವೊವಿಯೊ- ವೇರ್ಸ್‌ ಹಾಗೂ ಬಾಳ್‌ ಗಿತಾಂ ಕಾರ್ಯಾಗಾರ

ಮಂಗಳೂರು: ವೊವಿಯೊ- ವೇರ್ಸ್‌ ಹಾಗೂ ಬಾಳ್‌ ಗಿತಾಂ ಕಾರ್ಯಾಗಾರ

- Advertisement -
- Advertisement -

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸುರತ್ಕಲ್ ಘಟಕ ಇವರ ಸಹಯೋಗದಲ್ಲಿ 14.09.2025ರಂದು ಸುರತ್ಕಲ್ ನ ಸೆಕ್ರೆಡ್ ಹಾರ್ಟ್ ಸಭಾಭವನದಲ್ಲಿ ಮದುವೆ ಸೋಭಾನೆ ಹಾಡುಗಳು

ಹಾಗೂ ಶಿಶುಗೀತೆಗಳನ್ನೊಳಗೊಂಡ ವೊವಿಯೊ ವೇರ್ಸ್ ಹಾಗೂ ಬಾಳ್ ಗಿತಾಂ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಪ್ರಾಸ್ತಾವಿಕವಾಗಿ ಮಾತಾನಾಡಿ, ಮನೆಯಲ್ಲಿ ನಿಮ್ಮ ಮಕ್ಕಳೊಂದಿಗೆ ಮಾತೃಭಾಷೆಯಲ್ಲಿಯೇ ಮಾತಾನಾಡಿ ಹಾಗೂ ದೇವರಲ್ಲಿ ಮಾತೃಭಾಷೆಯಲ್ಲೇ ಪ್ರಾರ್ಥಿಸಿ. ಆಗ ಕೊಂಕಣಿ ಭಾಷೆ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ. ರೋಸ್ ಕ್ರೈಸ್ತ ಸಮುದಾಯದ ಸಾಂಪ್ರದಾಯಿಕ ಪದ್ದತಿ. ಹಿಂದೆ ಎಲ್ಲಾ  ಸಂಬಂಧಿಕರು, ಊರ ಜನರು ಒಟ್ಟು ಸೇರಿ 6-7 ದಿನ ಮದುವೆ ಕಾರ್ಯವನ್ನು ಸಂಭ್ರಮಿಸುತ್ತಿದ್ದರು. ಬದಲಾದ ಕಾಲದಲ್ಲಿ ರೋಸ್ ಸಂಭ್ರಮದಲ್ಲಿ ವೊವಿಯೊ ಹಾಡುತ್ತಿರುವ ಜನರೂ ಕಡಿಮೆಯಾಗಿದ್ದಾರೆ. ಜನರಿಗೆ ವೊವಿಯೊ ಬಗ್ಗೆ ತಿಳಿಸಿಕೊಡಲು ಈ ಕಾರ್ಯಗಾರವನ್ನು ಹಮ್ಮಿಕೊಂಡಿದೆ. ಎಲ್ಲರೂ ಇದರ ಪ್ರಯೋಜನವನ್ನು ಪಡೆಯಬೇಕು ಎಂದರು

ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ರೋಸ್ ನ ಸಂಪ್ರದಾಯವಾದ ತೆಂಗಿನಕಾಯಿ ಒಡೆದು, ಸುರತ್ಕಲ್ ಸೆಕ್ರೆಡ್ ಹಾರ್ಟ್

ಚರ್ಚ್‌ನ ಧರ್ಮಗುರುಗಳಾದ ಅ|ವಂ| ಆಸ್ಟಿನ್ ಪೀಟರ್ ಪೆರಿಸ್ ತೆಂಗಿನಹಾಲು ಹಿಂಡಿ ರಸ ತೆಗೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಫಾ| ಆಸ್ಟಿನ್ ಪೆರಿಸ್‌ರವರು ಮಾತಾನಾಡಿ, ಪ್ರಸ್ತುತ ಪರಿಗತಿಯಲ್ಲಿ ಸುಂದರವಾದ ವೊವಿಯೊ ಕೇಳಲು ಸಿಗುತ್ತವೆ. ಆದರೆ ಸಾಂಪ್ರದಾಯಿಕ ವೊವಿಯೊ ಅಳಿಸಿ ಹೋಗುತ್ತಿವೆ. ನಮ್ಮ ಸಂಪ್ರದಾಯವನ್ನು ಮುಂದುವರೆಸುವ ಅಗತ್ಯವಿದೆ. ಯಾವುದೇ ಸನ್ನಿವೇಶದಲ್ಲಿ ನಮ್ಮತನವನ್ನು ಬಿಡಬಾರದು. ಕೊಂಕಣಿ ಭಾಷೆಯು ಯಾವಾಗಲೂ ನಮ್ಮ ಮಾತು, ನಡೆ, ನುಡಿಯಲ್ಲಿರಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂ.ಆರ್.ಪಿ.ಎಲ್. ಸಂಸ್ಥೆಯ ಗ್ರೂಪ್ ಜನರಲ್ ಮ್ಯಾನೇಜರ್ ಶ್ರೀ ಕೃಷ್ಣಾ  ಹೆಗ್ಡೆಯವರು ಮಾತಾನಾಡಿ, ಕೊಂಕಣಿ ಭಾಷೆಯಲ್ಲಿ ತುಂಬಾ ಸುಂದರವಾದ ಸಂಸ್ಕೃತಿ ಇದೆ. ಇದನ್ನು ನಾವು ಪಾಲಿಸಬೇಕು.

ಕೊಂಕಣಿ ಭಾಷೆಗೆ ಗೌರವ ಕೊಡಬೇಕು ಹಾಗೂ ಸಂಸ್ಕೃತಿಯನ್ನು ಉಳಿಸಬೇಕು' ಎಂದು ಹೇಳಿ ಕಾರ್ಯಗಾರಕ್ಕೆ ಶುಭ ಹಾರೈಸಿದರು. ಗೌರವ ಅತಿಥಿಗಳಾಗಿ ಕಥೊಲಿಕ್ ಸಭಾ ಸುರತ್ಕಲ್ ವಲಯದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜ, ಕಥೊಲಿಕ್ ಸಭಾ ಸುರತ್ಕಲ್ ಘಟಕದ ಅಧ್ಯಕ್ಷರಾದ ಶ್ರೀ ಓಲ್ವಿನ್ ಡಿಸೋಜ, ಕಥೊಲಿಕ್ ಸಭಾ ಸುರತ್ಕಲ್ ಘಟಕದ ಕಾರ್ಯದರ್ಶಿ ಜೆನೆಟ್

ಡಿಸೋಜ, ಸುರತ್ಕಲ್ ಚರ್ಚ್‌ನ ಉಪಾಧ್ಯಕ್ಷರಾದ ಶ್ರೀ ರಸ್ಸೆಲ್ ರೋಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ ಹಾಜರಿದ್ದರು. ಸ್ಥಳೀಯ ಸಂಚಾಲಕರಾದ ಶ್ರೀ ಜೋರ್ಜ್ ಲಿಗೋರಿ ಧನ್ಯವಾದ ಅರ್ಪಿಸಿದರು. ಶ್ರೀಮತಿ ವೀರಾ ಪಿಂಟೊ ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀಮತಿ ಹಿಲ್ಡಾ ಮೊರಾಸ್, ಶ್ರೀ ಜೇಮ್ಸ್ ಡಿಸೋಜ, ಶ್ರೀಮತಿ ರೀನಾ ಡಿಸೋಜ, ಶ್ರೀಮತಿ ವೀಣಾ ಪಿರೇರಾ ಕಾರ್ಯಗಾರವನ್ನು ನಡೆಸಿಕೊಟ್ಟರು. ನೆರೆದವರು ಕಾರ್ಯಗಾರದಲ್ಲಿ ಆಸಕ್ತಿಯಿಂದ ಪಾಲ್ಗೊಂಡರು. ಸಮಾರೋಪ ಕಾರ್ಯಾಗಾರದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಕೇಂದ್ರೀಯ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಾರ್ಯಗಾರವನ್ನು ಹಮ್ಮಿಕೊಂಡು, ಕೊಂಕಣಿ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನವು ಯಶಸ್ವಿಯಾಗಲಿ ಎಂದರು.

ಅಕಾಡೆಮಿ ಸದಸ್ಯರಾದ ಶ್ರೀ ರೊನಾಲ್ಡ್ ಕ್ರಾಸ್ತಾ ಹಾಗೂ ಕಥೊಲಿಕ್ ಸಭಾ ಸುರತ್ಕಲ್ ಘಟಕದ ಅಧ್ಯಕ್ಷರಾದ ಶ್ರೀ  ಓಲ್ವಿನ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ತರಬೇತು ಪಡೆದವರಿಗೆ ಶ್ರೀ ಸಂತೋಷ್‌ ಡಿಸೋಜರವರು ಪ್ರಮಾಣಪತ್ರವನ್ನು ವಿತರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂ.ಆರ್.ಪಿ.ಎಲ್. ಸಂಸ್ಥೆಯ ಗ್ರೂಪ್ ಜನರಲ್ ಮ್ಯಾನೇಜರ್ ಶ್ರೀ ಕೃಷ್ಣಾ  ಹೆಗ್ಡೆಯವರು ಮಾತಾನಾಡಿ, ಕೊಂಕಣಿ ಭಾಷೆಯಲ್ಲಿ ತುಂಬಾ ಸುಂದರವಾದ ಸಂಸ್ಕೃತಿ ಇದೆ. ಇದನ್ನು ನಾವು ಪಾಲಿಸಬೇಕು.

ಕೊಂಕಣಿ ಭಾಷೆಗೆ ಗೌರವ ಕೊಡಬೇಕು ಹಾಗೂ ಸಂಸ್ಕೃತಿಯನ್ನು ಉಳಿಸಬೇಕು' ಎಂದು ಹೇಳಿ ಕಾರ್ಯಗಾರಕ್ಕೆ ಶುಭ  ಹಾರೈಸಿದರು. ಗೌರವ ಅತಿಥಿಗಳಾಗಿ ಕಥೊಲಿಕ್ ಸಭಾ ಸುರತ್ಕಲ್ ವಲಯದ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜ, ಕಥೊಲಿಕ್  ಸಭಾ ಸುರತ್ಕಲ್ ಘಟಕದ ಅಧ್ಯಕ್ಷರಾದ ಶ್ರೀ ಓಲ್ವಿನ್ ಡಿಸೋಜ, ಕಥೊಲಿಕ್ ಸಭಾ ಸುರತ್ಕಲ್ ಘಟಕದ ಕಾರ್ಯದರ್ಶಿ ಜೆನೆಟ್

ಡಿಸೋಜ, ಸುರತ್ಕಲ್ ಚರ್ಚ್‌ನ ಉಪಾಧ್ಯಕ್ಷರಾದ ಶ್ರೀ ರಸ್ಸೆಲ್ ರೋಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯರಾದ ನವೀನ್ ಲೋಬೊ, ರೊನಾಲ್ಡ್ ಕ್ರಾಸ್ತಾ ಹಾಜರಿದ್ದರು. ಸ್ಥಳೀಯ ಸಂಚಾಲಕರಾದ ಶ್ರೀ ಜೋರ್ಜ್ ಲಿಗೋರಿ ಧನ್ಯವಾದ ಅರ್ಪಿಸಿದರು. ಶ್ರೀಮತಿ ವೀರಾ ಪಿಂಟೊ ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀಮತಿ ಹಿಲ್ಡಾ ಮೊರಾಸ್, ಶ್ರೀ ಜೇಮ್ಸ್ ಡಿಸೋಜ, ಶ್ರೀಮತಿ ರೀನಾ ಡಿಸೋಜ, ಶ್ರೀಮತಿ ವೀಣಾ ಪಿರೇರಾ ಕಾರ್ಯಗಾರವನ್ನು ನಡೆಸಿಕೊಟ್ಟರು. ನೆರೆದವರು ಕಾರ್ಯಗಾರದಲ್ಲಿ ಆಸಕ್ತಿಯಿಂದ ಪಾಲ್ಗೊಂಡರು. ಸಮಾರೋಪ ಕಾರ್ಯಾಗಾರದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಕೇಂದ್ರೀಯ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಾರ್ಯಗಾರವನ್ನು ಹಮ್ಮಿಕೊಂಡು, ಕೊಂಕಣಿ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನವು ಯಶಸ್ವಿಯಾಗಲಿ ಎಂದರು.

ಅಕಾಡೆಮಿ ಸದಸ್ಯರಾದ ಶ್ರೀ ರೊನಾಲ್ಡ್ ಕ್ರಾಸ್ತಾ ಹಾಗೂ ಕಥೊಲಿಕ್ ಸಭಾ ಸುರತ್ಕಲ್ ಘಟಕದ ಅಧ್ಯಕ್ಷರಾದ ಶ್ರೀ ಓಲ್ವಿನ್ ಡಿಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ತರಬೇತು ಪಡೆದವರಿಗೆ ಶ್ರೀ ಸಂತೋಷ್‌ ಡಿಸೋಜರವರು ಪ್ರಮಾಣಪತ್ರವನ್ನು ವಿತರಿಸಿದರು.

- Advertisement -

Latest News

error: Content is protected !!