Saturday, June 6, 2026
Homeಕರಾವಳಿಉಡುಪಿಮಣಿಪಾಲ ವಿಶ್ವವಿದ್ಯಾಲಯದಿಂದ ಸವಿತ ಎಸ್‌ ರೈ ಅವರಿಗೆ ಪಿಎಚ್‌ಡಿ ಪದವಿ

ಮಣಿಪಾಲ ವಿಶ್ವವಿದ್ಯಾಲಯದಿಂದ ಸವಿತ ಎಸ್‌ ರೈ ಅವರಿಗೆ ಪಿಎಚ್‌ಡಿ ಪದವಿ

- Advertisement -
- Advertisement -

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌, ಮಣಿಪಾಲ ವಿಶ್ವವಿದ್ಯಾಲಯವು ಸವಿತ ಎಸ್ ಅವರ “Determinants of Organisational Commitment: Is Ethical Leadership a Game- Changer? ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಪಿಎಚ್‌ಡಿ ಪದವಿ ನೀಡಿದೆ.

ಮಾಹೆ, ಮಣಿಪಾಲದ ಇನ್ಸಿಟ್ಯೂಟ್ ಆಫ್ ಮ್ಯಾನೇಜೆಂಟ್ (ಎಂಐಎಂ), ಸಹ ಪ್ರಾಧ್ಯಾಪಕ ಡಾ. ನವೀನ್ ಕುಮಾರ್ ಕೂಡಮಾರ, ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಇವರು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮುಕ್ತೇಸರರಾದ ಮಾಣಿಗುತ್ತು ಸಚಿನ್ ರೈ ಯವರ ಪತ್ನಿ ಮತ್ತು ಶಂಕರ ಎನ್. ಶೆಟ್ಟಿ ತಾಳಿಪಾಡಿ ಮೂಡ್ರಗುತ್ತು ಹಾಗೂ ವಿಜಯ ಎಸ್. ಶೆಟ್ಟಿ ಬೇಳೂರು ದನ್ಯಾಡಿ ಮನೆ ದಂಪತಿಯವರ ಪುತ್ರಿ ಮತ್ತು ಬೈಲುಕೆಳಗಿನಮನೆ ದಿ| ಕೊಚ್ಚಣ್ಣ ರೈ ಹಾಗೂ ಮಾಣಿಗುತ್ತು ಪ್ರಫುಲ್ಲ ಕೆ ರೈ ಅವರ ಸೊಸೆ.

- Advertisement -

Latest News

error: Content is protected !!