Friday, June 26, 2026
Homeಅಪರಾಧಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾಗೆ ಲುಕ್ ಔಟ್ ನೋಟಿಸ್‌ ಜಾರಿ;...

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾಗೆ ಲುಕ್ ಔಟ್ ನೋಟಿಸ್‌ ಜಾರಿ; ಉದ್ಯಮಿಯೋರ್ವರಿಗೆ 60 ಕೋಟಿ ರೂ. ವಂಚಿಸಿದ ಆರೋಪ

- Advertisement -
- Advertisement -

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ವಿರುದ್ಧ ಉದ್ಯಮಿಯೋರ್ವರಿಗೆ 60 ಕೋಟಿ ರೂ. ವಂಚನೆಗೈದಿರುವ ಆರೋಪದಲ್ಲಿ ಪೊಲೀಸರು ಲುಕ್ ಔಟ್ ನೋಟಿಸ್‌ ಅನ್ನು ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ.

ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅವರು ಬೆಸ್ಟ್ ಡೀಲ್‌ ಟಿವಿ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಲು ಹಣ ಹೂಡಿಕೆ ಮಾಡಿದ್ದು, ಈ ಸಂಬಂಧ ಉದ್ಯಮಿ ದೀಪಕ್ ಕೊಠಾರಿ ಎಂಬವರಿಗೆ 60ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನು ಆರ್ಥಿಕ ಅಪರಾಧ ದಳ ಮುಂಬೈ ಪೊಲೀಸರಿಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು, ದಂಪತಿಗಳಿಬ್ಬರು ಮನೆಯಲಿಲ್ಲದ ಕಾರಣದಿಂದ, ಆಗಾಗ ವಿದೇಶ ಪ್ರವಾಸ ಕೈಗೊಳ್ಳುವ ಹಿನ್ನೆಲೆಯಲ್ಲಿ ಅವರಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!