ಬೆಳ್ತಂಗಡಿ : ಹುಣ್ಸೆಕಟ್ಟೆಯಲ್ಲಿ ಜಿಂಕೆಯೊಂದು ಗಾಯವಾಗಿ ಬಿದ್ದಿದ್ದು ಅರಣ್ಯ ಇಲಾಖಾ ಸಿಬ್ಬಂದಿ ಕ್ಲಪ್ತ ಸಮಯದಲ್ಲಿ ಧಾವಿಸಿ ಮುಂದಿನ ಚಿಕಿಸ್ತೆ ಗಾಗಿ ಕಳುಹಿಸಿ ಕೊಡಲಾಯಿತು.
ಅತೀ ಹೆಚ್ಚು ನಾಯಿಗಳ ಕಾಟದಿಂದ ಈ ಘಟನೆ ಸಂಭವಿಸಿದ್ದು, ನಾಯಿಗಳು ಕಾಡಿನಿಂದ ಅಟ್ಟಾಡಿಸಿಕೊಂಡು ಬಂದಿದ್ದು ನಾರಾಯಣ ಪೂಜಾರಿ ಯವರ ಮನೆಯ ಸಮೀಪವಿರುವ ಬಟ್ಟೆ ಒಗೆಯುವ ಕಲ್ಲಿಗೆ ಆ.22 ರಂದು ಬೆಳಗ್ಗೆ ತಾಗಿ ಗಾಯಗೊಂಡಿದೆ. ಘಟನೆಯ ಸ್ಥಳಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆಯ ಸಿಬ್ಬಂದಿ ಬಂದಿದ್ದು ಜಿಂಕೆಯನ್ನು ರಕ್ಷಿಸಿದ್ದಾರೆ . ಹಲವು ದಿನಗಳಿಂದ ಈ ಭಾಗದಲ್ಲಿ ಬೀದಿ ನಾಯಿಗಳಿಂದ ಊರಿನವರಿಗೆ ಮತ್ತು ಕಾಡು ಪ್ರಾಣಿಗಳಿಗೂ ಸಮಸ್ಯೆ ಆಗುತ್ತಿದೆ.
15ಕ್ಕಿಂತ ಹೆಚ್ಚು ನಾಯಿಗಳು ಈ ಪ್ರದೇಶದಲ್ಲಿದ್ದು, ಶಾಲೆಗೆ ತೆರಳುವ ಮಕ್ಕಳನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದು, ಪಾದಾಚಾರಿಗಳು, ಮಕ್ಕಳು ಭಯದಿಂದ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರ ಪಂಚಾಯತ್ ಇದರ ಬಗ್ಗೆ ತಕ್ಷಣ ಕ್ರಮ ಕೈ ಗೊಳ್ಳುವಂತೆ ಸ್ಥಳೀಯರ ಆಗ್ರಹ ಮಾಡುತ್ತಿದ್ದಾರೆ.


