ಮಂಡ್ಯ : ಕೊರೊನಾ ವೈರಸ್ ಭಯಕ್ಕಿಂತ ಇವತ್ತು ಬಹುತೇಕರನ್ನು ಕಾಡುತ್ತಿರುವ ಭಯ ಅಂದ್ರೆ ಎಲ್ಲಾದರೂ ಕೋವಿಡ್ ಬಂದು ನಾವು ಆಸ್ಪತ್ರೆ ಸೇರೋ ಹಾಗಾದ್ರೆ ಅಲ್ಲಿ ನಮ್ಮ ಪಾಡೇನೂ ಅಂತಾ. ಹೆಚ್ಚಿನ ಕೋವಿಡ್ ಆಸ್ಪತ್ರೆಗಳಲ್ಲಿ ಸರಿಯಾದ ಊಟ ಇಲ್ಲ, ಬೆಡ್ ಇಲ್ಲ, ರೋಗಿಗಳನ್ನು ನೋಡೋರೇ ಇಲ್ಲ ಎಂಬ ಆರೋಪಗಳು ಆರಂಭದಿಂದಲೂ ಕೇಳಿ ಬರುತ್ತಲೇ ಇದೆ. ಆದ್ರೆ ಇದಕ್ಕೆ ತದ್ವಿರುದ್ಧವಾದ ಆಸ್ಪತ್ರೆಗಳು ಕೂಡ ನಮ್ಮಲ್ಲಿವೆ ಅನ್ನೋದಕ್ಕೆ ಸಾಕ್ಷಿ ಹೇಳುತ್ತಿದೆ ಈ ಆಸ್ಪತ್ರೆ.
ಅಂದ್ಹಾಗೆ ಮಂಡ್ಯದ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ನೀಡುವ ಊಟದ ವಿಡಿಯೋ ಒಂದು ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. ಇಲ್ಲಿ ರೋಗಿಗಳಿಗೆ ಎಷ್ಟು ಒಳ್ಳೆ ಸೇವೆ ನೀಡುತ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿ ಹೇಳುತ್ತಿದೆ ಈ ವಿಡಿಯೋ. ಅಲ್ಲಿರುವಂತಹ ರೋಗಿಗಳೇ ಆಸ್ಪತ್ರೆಯಲ್ಲಿ ಸಿಗುತ್ತಿರುವ ಸೇವೆಗಳ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ. ಅವರೆಲ್ಲರೂ ಹೇಳುತ್ತಿರೋದು ಒಂದೇ ಮಾತು. ಕೊರೊನಾಗೆ ಹೆದರುವ ಅಗತ್ಯ ಅಲ್ಲ. ಅದೊಂದು ಸಾಮಾನ್ಯ ಜ್ವರ. ಕೊರೊನಾಗೆ ಧೈರ್ಯವೊಂದೇ ಔಷಧಿ ಎನ್ನುತ್ತಿದ್ದಾರೆ.


