- Advertisement -
![]()
- Advertisement -
ಬೆಳ್ತಂಗಡಿ: ಧರ್ಮಸ್ಥಳ ಸ್ನಾನಘಟ್ಟದ ಸಮೀಪದಲ್ಲಿ ಈಗಾಗಲೇ ಅನಾಮಿಕ ಗುರುತಿಸಿರುವ 13 ನೇ ಸ್ಥಳದ ಶೋಧ ಕಾರ್ಯಕ್ಕೆ ಆ.12 ರಂದು ಜಿಪಿಆರ್ ಯಂತ್ರ ಈಗಾಗಲೇ ಆಗಮಿಸಿದ್ದು, ಇದೀಗ ಎಸ್ಐಟಿ ಮುಖ್ಯಸ್ಥ ಡಾ.ಪ್ರಣವ್ ಮೊಹಂತಿ, ಎಸಿ ಸ್ಟೆಲ್ಲಾ ವರ್ಗೀಸ್ ಸ್ಥಳಕ್ಕಾಗಮಿಸಿದ್ದಾರೆ.
ಅನಾಮಿಕ ದೂರುದಾರ ಮೃತದೇಹನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ ಪ್ರಕರಣದ ತನಿಖೆಯಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ನಡೆದಿದ್ದು ಆ.11 ರಂದು ಸಂಜೆ 2:45 ಕ್ಕೆ ಜಿ.ಪಿ.ಆರ್ ಯಂತ್ರವನ್ನು ಪ್ರಾಯೋಗಿಕ ತನಿಖೆ ನಡೆಸಿದ್ದರು. ಇದೀಗ ಅನಾಮಿಕನೊಂದಿಗೆ ತನಿಖಾಧಿಕಾರಿಗಳು 12.45 ಕ್ಕೆ ಸ್ಥಳಕ್ಕಾಗಿಮಿಸಿದ್ದಾರೆ. 13 ನೇ ಸ್ಥಳದಲ್ಲಿ ಸುಮಾರು 10 ಸೆಂಟ್ಸ್ ಸ್ಥಳದಲ್ಲಿ ಬೆಳೆದಿದ್ದ ಹುಲ್ಲು ತೆರವುಗೊಳಿಸಲಾಗಿದೆ. ಇದೀಗ ಡಾ.ಪ್ರಣವ್ ಮೊಹಂತಿ ಹಾಗೂ ಎಸಿ ಸ್ಟೆಲ್ಲಾ ವರ್ಗೀಸ್ ಅವರು ಅನಾಮಿಕನೊಂದಿಗೆ ಜಿಪಿಆರ್ ಮೂಲಕ ಶೋಧ ಕಾರ್ಯಾಚರಣೆಗೆ ತಯಾರಿ ನಡೆಸಲಾಗುತ್ತಿದೆ. ಸ್ಥಳ ಶೋಧಕ್ಕೆ ಕಾರ್ಮಿಕರನ್ನು ನಿಯೋಜಿಸಲಾಗಿದೆ.
- Advertisement -


