Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಅಪ್ರಾಪ್ತೆಯನ್ನು ಬೆದರಿಸಿ ಗರ್ಭವತಿಯಾಗಿಸಿದ ಪ್ರಕರಣ: ಅಟ್ರಾಸಿಟಿ ಮತ್ತು ಪೋಕ್ಸೋ ಪ್ರಕರಣದಡಿ ಆರೋಪಿಯ ಬಂಧನ

ಬೆಳ್ತಂಗಡಿ : ಅಪ್ರಾಪ್ತೆಯನ್ನು ಬೆದರಿಸಿ ಗರ್ಭವತಿಯಾಗಿಸಿದ ಪ್ರಕರಣ: ಅಟ್ರಾಸಿಟಿ ಮತ್ತು ಪೋಕ್ಸೋ ಪ್ರಕರಣದಡಿ ಆರೋಪಿಯ ಬಂಧನ

- Advertisement -
- Advertisement -

ಬೆಳ್ತಂಗಡಿ : ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನನ್ನು ಧರ್ಮಸ್ಥಳ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿರುವುದಲ್ಲದೆ  ವಿಚಾರವನ್ನು ಯಾರಿಗೂ  ತಿಳಿಸದಂತೆ ಬೆದರಿಕೆ ಹಾಕಿದ್ದು‌. ಕೆಲವು ದಿನಗಳ ಬಳಿಕ ಬಾಲಕಿ ಹೊಟ್ಟೆ ನೋವು ಎಂದು ಮನೆಯವರಿಗೆ ತಿಳಿಸಿದಾಗ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಗರ್ಭಿಣಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪೋಷಕರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಪುದುವೆಟ್ಟು ಗ್ರಾಮದ ಮೇಲ್ದಡ್ಕ ನಿವಾಸಿ ರಾಘವ ಗೌಡರ ಮಗ ವೃತ್ತಿಯಲ್ಲಿ ಪೈಂಟಿಂಗ್ ಮತ್ತು ಚಾಲಕ ಕೆಲಸ ಮಾಡುತ್ತಿದ್ದ ದಿನೇಶ್ ಗೌಡ(30) ಎಂಬಾತನ ವಿರುದ್ಧ ಪೋಕ್ಸೋ ಮತ್ತು ಅಟ್ರಾಸಿಟಿ ಅಡಿಯಲ್ಲಿ ಆ.11 ರಂದು ಪ್ರಕರಣ ದಾಖಲಿಸಿ ತನಿಖೆ ಬಳಿಕ ಅರೋಪಿಯನ್ನು ಆ.11 ರಂದು ಬಂಧಿಸಿ ಜೈಲಿಗಟ್ಟಿದ್ದಾರೆ.

- Advertisement -

Latest News

error: Content is protected !!