Saturday, June 13, 2026
Homeಕರಾವಳಿನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಟ್ಟಡ ಮಾಲೀಕ ಸಾವು

ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಟ್ಟಡ ಮಾಲೀಕ ಸಾವು

- Advertisement -
- Advertisement -

ಕಾಸರಗೋಡು: ನಿರ್ಮಾಣ ಹಂತದ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಕಟ್ಟಡ ಮಾಲೀಕ ಚಿಕಿತ್ಸೆ ಫಲಕರಿಯಾಗದೆ ಮೃತಪಟ್ಟ ಘಟನೆ ಮಾವುಂಗಾಲ್ ನ ಮೂಲಕಂಡ ಎಂಬಲ್ಲಿ ನಡೆದಿದೆ.

ಮೃತಪಟ್ಟವರು ವೆಳ್ಳಿಕೋತ್ ಪೇರಲದ ರಾಯ್ ಜೋಸೆಫ್ (48) ಎನ್ನಲಾಗಿದೆ.

ನರೇಂದ್ರ ಎನ್ನುವ ಗುತ್ತಿಗೆದಾರನು ವೆಳ್ಳಿಕೋತ್ ಪೇರಲದ ರಾಯ್ ಜೋಸೆಫ್ ಅವರನ್ನು ಕೆಳಗೆ ದೂಡಿ ಹಾಕಿದ್ದಾಗಿ ಆರೋಪಿಸಲಾಗಿದೆ.

ಆಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಯಮ ನಡೆಸುತ್ತಿದ್ದ ರಾಯ್ ಜೋಸೆಫ್ ಅವರು ಹೊಸ ಕಟ್ಟಡವನ್ನು ನಿರ್ಮಿಸುತ್ತಿದ್ದರು. ಆಗಸ್ಟ್‌ 3ರಂದು ರಾಯ್‌ ಜೋಸೆಫ್‌ ಹಾಗೂ ಕಟ್ಟಡ ಗುತ್ತಿಗೆದಾರನ ನಡುವೆ ಕೆಲಸದ ಬಗ್ಗೆ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಮಾತು ವಿಕೋಪಕ್ಕೆ ತಿರುಗಿ ರಾಯ್ ಜೋಸೆಫ್ ರನ್ನು ಗುತ್ತಿಗೆದಾರ ಮೂರನೇ ಮಹಡಿಯಿಂದ ತಳ್ಳಿ ಹಾಕಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡ ರಾಯ್ ರವರು ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ತನ್ನನ್ನ ಗುತ್ತಿಗೆದಾರ ದೂಡಿದ್ದಾಗಿ ತಿಳಿಸಿದ್ದಾರೆ. ರ

ಘಟನೆಯ ಬಗ್ಗೆ ಹೊಸದುರ್ಗ ಪೊಲೀಸರು ನರೇಂದ್ರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಈತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!